ನಾಟಕ

ಪರಿಮಳ ಕಾಲೊನಿ ಪ್ರಥಮ , ನನ ದಾದ ಒರಿಂಡ್ ದ್ವಿತೀಯ

ತುಳು ನಾಟಕ ಕಲಾವಿದರ ಒಕ್ಕೂಟ ಬಂಟ್ವಾಳ ತಾಲೂಕು ಘಟಕ: ತುಳು ನಾಟಕೊತ್ಸವ ಸಮಾರೋಪ

ಬಂಟ್ವಾಳನ್ಯೂಸ್

ಜಾಹೀರಾತು

ತುಳು ನಾಟಕ ಕಲಾವಿದರ ಒಕ್ಕೂಟದ ಬಂಟ್ವಾಳ ತಾಲೂಕು ಘಟಕದ ವತಿಯಿಂದ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಒಂದು ವಾರ ನಡೆದ ವರೆಗೆ ತುಳು ನಾಟಕ ಸ್ಪರ್ಧೆಯಲ್ಲಿ  ಪುಂಜಾಲಕಟ್ಟೆ  ತಾಂಬೂಲ ಕಲಾವಿದೆರ್ ತಂಡದ ಪರಿಮಳ ಕಾಲೊನಿ ನಾಟಕ ಪ್ರಥಮ ಪ್ರಶಸ್ತಿ ಪಡೆದಿದೆ.

ಅಭಿನಯ ಕಲಾವಿದೆರ್ ಕುಡ್ತಮುಗೇರ್ ತಂಡದ ನನ ದಾದ ಒರಿಂಡ್ ದ್ವಿತೀಯ, ಓಂ ಶ್ರೀ ಕಲಾವಿದೆರ್ ಬಿ.ಸಿ.ರೋಡ್ ತಂಡದ ಅಂದ್ಂಡ ಅಂದ್ ಪನ್ಲೆ  ತೃತೀಯ ಸ್ಥಾನ ಪಡೆದಿದೆ.

ಬಂಟ್ವಾಳ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆ, ಸಂಸ್ಕೃತಿಯ ಉಳಿವಿಗೆ ತು ಳು ನಾಟಕಗಳ ಕೊಡುಗೆ ಅಪಾರ. ರಂಗ ಭೂಮಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದರು. ಬಂಟ್ವಾಳ ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಒಕ್ಕೂಟದ ಬಂಟ್ವಾಳ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಸಮಾರೋಪ ಭಾಷಣ ಮಾಡಿದರು . ಕಾರ್ಯಕ್ರಮದಲ್ಲಿ  ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ತುಕಾರಾಮ ಪೂಜಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ಆಚಾರ್ಯ, ದ. ಕ. ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ,ಚಲನಚಿತ್ರ ನಟ ವಿನೀತ್ ವಿ.ಜೆ., ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಮಾಕ್ಸಿಂ ಸಿಕ್ವೇರಾ,ಕೋಶಾಽಕಾರಿ ಐವಾನ್ ಡಿಸೋಜ, ಸಮಿತಿ ಸಹ ಸಂಚಾಲಕ ಪದ್ಮನಾಭ ಆಚಾರ್ಯ ಮತ್ತಿತರರು  ಉಪಸ್ಥಿತರಿದ್ದರು. ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ, ವಿನೀತ್ ವಿಜೆ, ತೀರ್ಪುಗಾರರಾದ ರಾಮಚಂದ್ರ ರಾವ್, ಸದಾಶಿವ ಶಿವಗಿರಿ ಕಲ್ಲಡ್ಕ, ಮಧು ಬಂಗೇರ ಕಲ್ಲಡ್ಕ  ಅವರನ್ನು ಸನ್ಮಾನಿಸಲಾಯಿತು. ದಿವಾಕರ ದಾಸ್ ಸ್ವಾಗತಿಸಿದರು. ಮಂಜು ವಿಟ್ಲ ವಂದಿಸಿದರು. ರಾಮಚಂದ್ರ ರಾವ್ ಫಲಿತಾಂಶ ವಿವರ ನೀಡಿದರು.  ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ: ನಿರ್ದೇಶನ: ಪ್ರಥಮ -ರಾಘವೇಂದ್ರ ಕಾರಂತ(ಪರಿಮಳ ಕಾಲೊನಿ)ದ್ವಿತೀಯ:ರಾಜಶೇಖರ ಶೆಟ್ಟಿ(ನನ ದಾದ ಒರಿಂಡ್), ತೃತೀಯ: ಸುರೇಶ್ ಕುಲಾಲ್( ಅಂದ್ಂಡ ಅಂದ್ ಪನ್ಲೆ ).
ಉತ್ತಮ ನಾಯಕ ನಟ:ಪ್ರಥಮ: ಚೇತನ್(ಅಂದ್ಂಡ ಅಂದ್ ಪನ್ಲೆ), ದ್ವಿತೀಯ: ಜಯರಾಜ್ ಅತ್ತಾಜೆ (ಪರಿಮಳ ಕಾಲೊನಿ), ತೃತೀಯ: ಮನೀಶ್ (ನನ ದಾದ ಒರೀಂಡ್).
ಉತ್ತಮ ನಾಯಕಿ ನಟಿ: :ಪ್ರಥಮ: ಚೈತ್ರಾ ಕಲ್ಲಡ್ಕ (ಅಂದ್ಂಡ ಅಂದ್ ಪನ್ಲೆ), ದ್ವಿತೀಯ:  ಅನೀಶ (ಕೆಂಪು ಗುಲಾಬಿ ಮೋಕೆದ ಸಂಕೇತ-ಶ್ರೀ ಸಿದ್ದಿ ವಿನಾಯಕ ಮೋಕೆದ ಕಲಾವಿದೆರ್, ಬೆಂಜನ ಪದವು),  ತೃತೀಯ: ನಿಶ್ಚಿತ ಪೆರುವಾಯಿ (ಆರ್ ತೂಪೆರ್, ಶ್ರೀ ದುರ್ಗಾ ಕಲಾತಂಡ ಮೈರ, ಕೇಪು).
ಉತ್ತಮ ಪೋಷಕ ನಟ: ಪ್ರಥಮ: ರತ್ನದೇವ್ ಪುಂಜಾಲಕಟ್ಟೆ(ಪರಿಮಳ ಕಾಲೊನಿ)
ದ್ವಿತೀಯ: ಗಣೇಶ( ನನ ದಾದ ಒರೀಂಡ್). ತೃತೀಯ: ರಾಜೇಶ್ ಆಚಾರ್ಯ( ಅಂದ್ಂಡ ಅಂದ್ ಪನ್ಲೆ).
ಉತ್ತಮ ಪೋಷಕ ನಟಿ: ನವೀಕ್ಷಾ ಪಚ್ಚಿನಡ್ಕ(ಅಂದ್ಂಡ ಅಂದ್ ಪನ್ಲೆ), ದ್ವಿತೀಯ:ಕಾವ್ಯಶ್ರೀ ನಾಕುನಾಡ್(ಪರಿಮಳ ಕಾಲೊನಿ), ತೃತೀಯ: ಸುರೇಶ್ ವಿಟ್ಲ(ಚಂದ್ರ ಗ್ರಹಣ-ಸ್ಪಂದನಾ ಕಲಾವಿದೆರ್ ಬಂಟ್ವಾಳ).
ಉತ್ತಮ ಖಳ ನಟ: ದಾಮೋದರ ಆಚಾರ್ಯ, ವಗ್ಗ(ಪರಿಮಳ ಕಾಲೊನಿ), ದ್ವಿತೀಯ: ಅಕ್ಷತ್( ನನ ದಾದ ಒರೀಂಡ್), ತೃತೀಯ: ಸುನಿಲ್ (ಚಂದ್ರಗ್ರಹಣ).
ಉತ್ತಮ ಖಳ ನಟಿ: ಪ್ರಥಮ : ಯಶು ತುಂಬೆ( ನನ ದಾದ ಒರೀಂಡ್)
ಉತ್ತಮ ಹಾಸ್ಯ ನಟ:ಪ್ರಥಮ : ಸುರೇಶ್ ಸುವರ್ಣ(ಪರಿಮಳ ಕಾಲೊನಿ), ದ್ವಿತೀಯ: ಸಚಿನ್ ಅತ್ತಾಜೆ(ಪರಿಮಳ ಕಾಲೊನಿ) ತೃತೀಯ: ನಿತಿನ್ ಹೊಸಂಗಡಿ(ಆರ್ ತೂಪೆರ್).
ಉತ್ತಮ ಹಾಸ್ಯ ನಟಿ: ಪ್ರಥಮ;ಜೋಸ್ಲಿನ್ ಪಿಂಟೋ( ನನ ದಾದ ಒರೀಂಡ್), ದ್ವಿತೀಯ: ವಾಣಿಶ್ರೀ ನಾಕುನಾಡ್(ಪರಿಮಳ ಕಾಲೊನಿ), ತೃತೀಯ: ಹರ್ಷಿತ್ ಮಿತ್ತನಡ್ಕ( ಆರ್ ತೂಪೆರ್).
ರಂಗ ಸಜ್ಜಿಕೆ: ತಾಂಬೂಲ ಕಲಾವಿದೆರ್, ಪುಂಜಾಲಕಟ್ಟೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ