ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ಎಂಬಲ್ಲಿ ನ. ೧ ರಂದು ಇರ್ಷಾದುಲ್ ಇಸ್ಲಾಂ ಮದರಸ ಮಾಣೂರು ವಠಾರದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶಕ್ಕಾಗಿ ಇರ್ಷಾದಿಯಾ ಫ್ರೆಂಡ್ಸ್ ಸಂಸ್ಥೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ
ಸಂಘಟನೆಗಳನ್ನು ತೆರೆಯುವುದು ಮುಖ್ಯವಲ್ಲ ಅದನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ಮುಖ್ಯವಾಗಿದೆ, ಸಂಸ್ಥೆಯ ಒಂದು ಪೈಸೆಯಾದರೂ ವೈಯಕ್ತಿಕ ಉದ್ದೇಶಕ್ಕೆ ಉಪಯೋಗವಾಗವಾಗದಿರಲಿ ಎಂದು ಸಂದೇಶ ನೀಡಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಿದರು. ಇರ್ಷಾದಿಯಾ ಫ್ರೆಂಡ್ಸ್ ಮಾಣೂರು ಗೌರವಾಧ್ಯಕ್ಷರಾಗಿ ಎಂ.ಎಚ್.ಹಸನಬ್ಬಗೌರವ ಸಲಹೆಗಾರರಾಗಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಹಮೀದ್ ಮುಸ್ಲಿಯಾರ್ ಮತ್ತು ಹಮೀದ್ ವಾಟರ್ ಸಪ್ಲೈ, ಅಧ್ಯಕ್ಷರಾಗಿ ಬಶೀರ್ ಉಮನಗುಡ್ಡೆ, ಉಪಾಧ್ಯಕ್ಷರಾಗಿ ಶಹರೋಝ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಸದ್ದಾಂ ಮಾಣೂರು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮಾಣೂರು, ಸಂಶೀರ್ ಮಾಣೂರು, ಉಮರಬ್ಬ, ಮಜೀದ್, ಶಬೀರ್ ಮಾಣೂರು, ಇಸ್ಮಾಯಿಲ್ ಮಾಣೂರು, ಬದ್ರುದ್ದೀನ್ ಮಾಣೂರು, ಅಝ್ಮಾಲ್, ಫಯಾಝ್, ಮುಹಾಝ್, ಬಿಲಾಲ್, ಸಾಹಿಲ್, ಬದ್ರುದ್ದೀನ್ ಡಿ. ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಶೀರ್ ಉಮನಗುಡ್ಡೆ ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.
ಅಕ್ಬರ್ ಮಾಣೂರು ಸ್ವಾಗತಿಸಿ ವಂದಿಸಿದರು.