ಬಂಟ್ವಾಳ: ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ಜೇಸಿ ವತಿಯಿಂದ 116 ಮಂದಿ ಮೌನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಭಾವಸಿಂದು ಎಂಬ ಕಾರ್ಯಕ್ರಮದಲ್ಲಿ ಅಂಗನವಾಡಿ, ಬಿಸಿಯೂಟ, ಮಾಜಿ ಸೈನಿಕರು, ಪೌರ ಕಾರ್ಮಿಕರು, ರಕ್ತದಾನಿಗಳು, ಗೃಹರಕ್ಷಕದಳ, ಪವರ್ ಮ್ಯಾನ್, ಅಗ್ನಿಶಾಮಕದಳ ಸಿಬಂದಿ, ಸಮಾಜಸೇವಕರು, ಅಂಚೆಪೇದೆಗಳನ್ನು ಗುರುತಿಸಿ ಗೌರವಿಸಲಾಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಭರತ್ ಕುಮಾರ್ ಶೆಟ್ಟಿ, ರಾಜಶೇಖರ ರೈ ಕಳ್ಳಿಗೆ, ಸದಾಶಿವ ಡಿ.ತುಂಬೆ, ಜೇಸಿ ಪ್ರಮುಖರಾದ ಸೌಮ್ಯಾ ರಾಕೇಶ್, ದೀಪಕ್ ಗಂಗೂಲಿ, ರವೀನ ಕುಲಾಲ್, ರಶ್ಮಿ ಶೆಟ್ಟಿ, ವಿದ್ಯಾ ಉಮೇಶ್, ಜಯರಾಜ್ ವೇದಿಕೆಯಲ್ಲಿದ್ದರು.
ಜೇಸಿಐ ಬಂಟ್ವಾಳದ ಅಧ್ಯಕ್ಷ ರೋಶನ್ ರೈ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರ್ದೇಶಕ ಹಾಗೂ ವಲಯ ಸಂಯೋಜಕ ಸಂತೋಷ್ ಜೈನ್ ವಂದಿಸಿದರು.