ಬಂಟ್ವಾಳ

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನಿಂದ ಜಶ್ನೇ ಮುಬಾರಕ್

ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಮನುಕುಲದ ಮಾದರಿ ನಾಯಕ ಪ್ರವಾದಿ (ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಜಶ್ನೇ ಮುಬಾರಕ್ ಕಾರ್ಯಕ್ರಮ ಸಜಿಪ ಮೂಡದ ಬಜಾರ್ ಆಡಿಟೋರಿಯಂ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಪ್ರತಿಯೊಬ್ಬರೂ ಅವರವರ ಧರ್ಮವನ್ನು ಅನುಸರಿಸಿ ಬದುಕುವುದರ ಜೊತೆಗೆ ಇತರ ಧರ್ಮಗಳನ್ನು ಗೌರವಿಸಬೇಕು ಎಲ್ಲರೂ ಅವರವರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಸ್ವತಂತ್ರರು ಎಂಬುದನ್ನು ಜನತೆಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಈ ನಿಟ್ಟಿನಲ್ಲಿ ಸರ್ವರನ್ನೂ ಸೇರಿಸಿಕೊಂಡು ಮಾಡುವ ಇಂತಹ ವಿನೂತನ ಕಾರ್ಯಕ್ರಮ ಜಿಲ್ಲೆಯಲ್ಲೇ ಮಾದರಿ ಕಾರ್ಯಕ್ರಮ ವಾಗಿದೆ ಎಂದರು.

   ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಧಾರ್ಮಿಕ ಗುರುಗಳಾದ ಅಶ್ಫಾಕ್ ಫೈಝಿ ಹಾಗೂ ಯಾಕೂಬ್ ಸಅದಿ ಮಾತನಾಡಿದರು.

   ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಮಾಜಿ ಸದಸ್ಯ ಸಂಜೀವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕಾದ್ಯಕ್ಷ ಅರ್ಶದ್ ಸರವು ಅತಿಥಿಗಳಾಗಿ ಭಾಗವಹಿಸಿದ್ದರು.

    ಮಹಿಳಾ ಕಾಂಗ್ರೆಸ್ ಸಂಯೋಜಕಿ, ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯೆ ಫೌಝಿಯಾ ಮತ್ತು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ನಸೀಮಾ ಇವರ  ನೇತೃತ್ವದಲ್ಲಿ ನಡೆದ ಈ . ಕಾರ್ಯಕ್ರಮದಲ್ಲಿ ವಿವಿಧ ಮದ್ರಸ ವಿದ್ಯಾರ್ಥಿಗಳಿಂದ ಹಾಡು, ಭಾಷಣ, ಪ್ರಬಂಧ, ಬುರ್ದಾ  ಹಾಗೂ ದಫ್ ಸ್ಪರ್ಧೆಗಳು ನಡೆದವು.

    ಪಕ್ಷ ಪ್ರಮುಖರಾದ ಲುಕ್ಮಾನ್ ಬಂಟ್ವಾಳ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪಿ.ಎ.ರಹೀಂ, ಕೆ.ಪದ್ಮನಾಭ ರೈ, ರಝಾಕ್ ಕುಕ್ಕಾಜೆ, ಶರೀಫ್ ಆಲಾಡಿ, ಇಕ್ಬಾಲ್ ಜೆಟಿಟಿ, ನಿರಂಜನ್ ರೈ ನೇರಳಕಟ್ಟೆ, ಕೆ.ಬಾಲಕೃಷ್ಣ ಆಳ್ವ ಕೊಡಾಜೆ, ಸಂದೇಶ್ ಶೆಟ್ಟಿ ಬಿಕ್ನಾಜೆ, ಸ್ಟೀವನ್ ಡಿ.ಸೋಜ, ನವೀನ್ ರೈ ಚೆಲ್ಲಡ್ಕ, ರಮೇಶ್ ಕುಲಾಲ್, ಹೈಡಾ ಸುರೇಶ್, ಜೋಸ್ಮಿನ್ ಡಿ.ಸೋಜ, ಜೆಸಿಂತಾ, ಪ್ರೀತಿ ಡಿನ್ನಾ ಪಿರೇರಾ, ಎನ್.ಅಬ್ದುಲ್ ಕರೀಂ ಬೊಳ್ಳಾಯಿ, ಸಿದ್ದೀಕ್ ಸರವು, ಆರಿಫ್ ನಂದಾವರ, ಜಿ.ಇಬ್ರಾಹಿಂ ಮಂಚಿ, ಇಬ್ರಾಹಿಂ.ಕೆ.ಮಾಣಿ.  ಮೆಲ್ವಿನ್ ಕಿಶೋರ್ ಮಾರ್ಟಿಸ್ ಮಾಣಿ, ಗಿರೀಶ್ ಪೆರ್ವ, ಉಮ್ಮರ್ ಸಾಲೆತ್ತೂರು, ಸುಲೈಮಾನ್ ಸೂರಿಕುಮೇರು, ನಿಯಾಝ್ ಪಜೀರು, ಝುಬೈರ್ ಪರ್ಲೋಟ್ಟು, ಶರೀಫ್ ನಂದಾವರ, ಅಝೀಝ್ ಬೊಳ್ಳಾಯಿ ಮೊದಲಾದವರು ಭಾಗವಹಿಸಿದ್ದರು.

    ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲ್ ಸ್ವಾಗತಿಸಿ, ವಂದಿಸಿದರು. ಅಶ್ರಫ್ ಸಖಾಫಿ ಕುರ್ನಾಡು ದುಹಾ ನೆರವೇರಿಸಿದರು, ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ