ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಭಾನುವಾರ ಕಲ್ಲಡ್ಕ ವಲಯ ಹವ್ಯಕ ಸಮಾವೇಶ ನಡೆಯಿತು. ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಮೆಸ್ಕಾಂನ ಎಇಇ ಪ್ರವೀಣ್ ಜೋಷಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಲಡ್ಕ ವಲಯಾಧ್ಯಕ್ಷ ರಮೇಶ್ ಭಟ್ ಸಂಘಟನೆಯ ಮಹತ್ವವನ್ನು ವಿವರಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್ ಕೊಂಕೊಡಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶಿಮಠ, ಹವ್ಯಕ ಮಂಡಲ ಗುರಿಕ್ಕಾರ ಉದಯ ಕುಮಾರ ಖಂಡಿಗೆ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಹವ್ಯಕ ಮಹಾಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ ಮಾತನಾಡಿ ಹವ್ಯಕರು ಸಂಘಟಿತರಾಗಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ಸಹಕಾರ ತತ್ವದ ಮೂಲಕ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿ ವಾಹಿನಿ ಅಧ್ಯಕ್ಷ ಭಾಸ್ಕರ ಭಟ್ ಹೊಸಮನೆ ವಿದ್ಯಾರ್ಥಿ ಸಂಘಟನೆಯ ಮಹತ್ವವನ್ನು ತಿಳಿಸಿದರು. ಕೃಷ್ಱಪ್ರಸಾದ್ ಸನ್ಮಾನಿತರ ಪರಿಚಯ ಮಾಡಿದರು. ಅಡ್ಕತಿಮಾರ್ ರಾಮಚಂದ್ರ ಭಟ್ ಸಹಕರಿಸಿದರು. ವಲಯ ಉಪಾಧ್ಯಕ್ಷ ಮುಳಿಯ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಮಾದಕಟ್ಟೆ ಮಹಾಬಲ ಭಟ್ ವಂದಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…