ಬಂಟ್ವಾಳ: ಬಂಟ್ವಾಳ ಸಮೀಪ ಶುಕ್ರವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿಗೆ ಬಸ್ ಡಿಕ್ಕಿಯಾಗಿ ಮೆಸ್ಕಾಂ ವಿಟ್ಲದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಜೋಷಿ (43) ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲ್ಪಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯುವಶರಾಗಿದ್ದಾರೆ. ಪತ್ನಿ, ಮಗ ಮತ್ತು ಮಗಳನ್ನು ಅವರು ಅಗಲಿದ್ದಾರೆ.
ಮಣಿಹಳ್ಳ ಸಮೀಪ ಜೋಷಿ ಪ್ರಯಾಣಿಸುತ್ತಿದ್ದ ಕಾರು ಸಹಿತ ಇನ್ನೊಂದು ಕಾರು ಹಾಗೂ ಬಸ್ಸಿನ ನಡುವೆ ಈ ಅಪಘಾತ ಸುಮಾರು 11 ಗಂಟೆಯ ವೇಳೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದರೆ, ಗಾಯಾಳುವನ್ನು ಹೊರತೆಗೆಯಲೂ ಸ್ಥಳೀಯರು ಪ್ರಯಾಸಪಟ್ಟರು. ಕೂಡಲೇ ಆಂಬುಲೆನ್ಸ್ ಮೂಲಕ ತುಂಬೆ ಹಾಗೂ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಜೋಷಿ ಅಸು ನೀಗಿದ್ದಾರೆ.
ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಬ್ರಿಝಾ ಕಾರು, ವಗ್ಗದ ಮದ್ವದಲ್ಲಿ ತನ್ನ ಮನೆಯಿಂದ ಬರುತ್ತಿದ್ದ ಮೆಸ್ಕಾಂನ ಪ್ರವೀಣ್ ಜೋಷಿ ಅವರ ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು, ಹಿಂಬದಿಯಿಂದ ಬಂದ ಬಸ್ ಕಾರುಗಳಿಗೆ ಡಿಕ್ಕಿ ಹೊಡೆದು ಮತ್ತಷ್ಟು ತೀವ್ರತೆಗೆ ಕಾರಣವಾಯಿತು. ವಿಜಯಲಕ್ಷ್ಮಿ ಗ್ರೂಪ್ ನ ಕ್ರೇನ್ ಬಳಸಿ ಅಪಘಾತ ನಡೆದ ವಾಹನಗಳನ್ನು ರಸ್ತೆಯಿಂದ ಬದಿಗೆ ಸೇರಿಸಲಾಯಿತು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ ಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…