ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಹಿನ್ನೆಲೆಯಲ್ಲಿ ನಿಧಿ ಕುಂಬಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಮಂಗ್ಲಿಮಾರ್ ದೈವಸಾನಿಧ್ಯ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಭಗವಂತನ ಇಚ್ಛೆಯಂತೆ ಎಲ್ಲಾ ಕಾರ್ಯಗಳು ನಡೆಯುತ್ತದೆ ಎಂದರು,.
ಈ ಸಂದರ್ಭ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ ಮತ್ತು ಮಾತೃ ಸಂಗಮ ಕಾರ್ಯಕ್ರಮ ನಡೆಯಿತು.
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್, ಬಂಟ್ವಾಳದ ಮಾಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರರಾದ ಡಾ. ಬಿ ರಮೇಶಾನಂದ ಸೋಮಾಯಾಜಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಲೋಕನಾಥ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಕೇಶ್ ಮಲ್ಲಿ, ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರಾದ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿಯಾದ ಇಂದಿರೇಶ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ, ಎರಡು ಸಮಿತಿಗಳ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ರಚನೆಯಾದ ಮಹಿಳಾ ವೇದಿಕೆಯ ಪ್ರಧಾನ ಸಂಚಾಲಕರಾಗಿ ಆಶಾ ಪಿ. ರೈ, ಮತ್ತು ಉಪ ಸಂಚಾಲಕರಾಗಿ ಸುಷ್ಮಾ ಚರಣ್ ಆಯ್ಕೆಯಾದರು. ಆರು ಸಹ ಸಂಚಾಲಕರ ಆಯ್ಕೆಯೂ ನಡೆಯಿತು. ಪ್ರಾರಂಭದಲ್ಲಿ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜತೆ ಕಾರ್ಯದರ್ಶಿ ಮಂಜು ವಿಟ್ಲ ವಂದಿಸಿದರು.