ಬಂಟ್ವಾಳ: ಬಿಜೆಪಿ ಯುವ ಮೋರ್ಚಾದಿಂದ ಪ್ರಧಾನಿ ಹುಟ್ಟುಹಬ್ಬದಂಗವಾಗಿ ರಕ್ತದಾನ ಶಿಬಿರ ಕೆಎಂಸಿ ಸಹಯೋಗದೊಂದಿಗೆ ಬಂಟ್ವಾಳದಲ್ಲಿ ನಡೆಯಿತು. ಈ ಸಂದರ್ಭ 172 ಯೂನಿಟ್ ರಕ್ತ, 124 ಅಯುಷ್ಮಾನ್ ಕಾರ್ಡ್ ನೋಂದಣಿ, 86 ಅಂಗಾಂಗ ದಾನ ನೋಂದಾವಣಿ ಮಾಡಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕೆ.ಎಂ.ಸಿ.ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ, ಅಂಗಾಗ ದಾನ ಮತ್ತು ನೇತ್ರದಾನ ಶಿಬಿರವನ್ನು ಯುವ ಮೋರ್ಚಾ ಏರ್ಪಡಿಸಿರುವುದು ಶ್ಲಾಘನೀಯ, ದೇಶದ ಭವಿಷ್ಯದ ನಿರ್ಮಾಣದಲ್ಲಿ ಮಹತ್ತರ ಸೇವೆ ನೀಡಿತ್ತಿರುವ ಮಹಾನ್ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಯುವ ಮೋರ್ಚಾ ಪ್ರಭಾರಿ ಪುರುಷೋತ್ತಮ ಶೆಟ್ಟಿ ವಾಮದಪದವು, ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಡಾ.ಐಶ್ವರ್ಯ ತೇಜ ಉಪಸ್ಥಿತರಿದ್ದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಟ್ರಾನ್ಸ್ ಪ್ಲಾಟ್ ಸಂಯೋಜಕಿ ಪದ್ಮಾ ವೇಣೂರು ಅವರು ಅಂಗಾಂಗ ದಾನದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುದೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾದ್ಯಕ್ಷರಾದ ಸಂತೋಷ್ ಬೊಳಿಯಾರ್,ಜಿಲ್ಲಾ ಕಾರ್ಯದರ್ಶಿ ಯಾದ ಭರತ್ ಶೆಟ್ಟಿ, ಬಂಟ್ವಾಳ ಮಂಡಲದ ಪ್ರದಾನ ಕಾರ್ಯದರ್ಶಿಯಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಬಿಜೆಪಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಮಾಧವ ಮಾವೆ, ಪುಷ್ಪರಾಜ ಚೌಟ, ಮೋಹನ ಪಿ.ಎಸ್, ಯಶೋಧರ ಕರ್ಬೆಟ್ಟು, ಗಣೇಶ್ ರೈ ಮಾಣಿ, ಹಿಂದೂ ಜಾಗರಣ ವೇದಿಕೆಯ ಪ್ರಶಾಂತ್ ಕೆಂಪುಗುಡ್ಡೆ, ಚಂದ್ರ ಕಲಾಯಿ, ಬಾಲಕೃಷ್ಣ, ತಿರುಲೇಶ್ ಬೆಳ್ಳೂರು, ಜಗದೀಶ್ ನೆತ್ರಕೆರೆ, ಗಣೇಶ್ ಕೆದಿಲ, ರತ್ನಾಕರ್ ಶೆಟ್ಟಿ ಕಲ್ಲಡ್ಕ ಮತ್ತು ಬಜರಂಗದಳ ದ ಪ್ರಮುಖರಾದ ಭುವಿತ್ ಶೆಟ್ಟಿ, ಅಭಿನ್ ರೈ, ಅಕೇಶ್ ಬೆಂಜನಪದವು ಸಹಿತ ವಿವಿಧ ಮೋರ್ಚಾಗಳ ಪ್ರಮುಖರು ಉಪಸ್ಥಿತರಿದ್ದರು. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾವ್ ಬಾಳಿಕೆ ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಶ್ ಕೋಟ್ಯಾನ್ ವಂದಿಸಿದರು. ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರ್ವಹಿಸಿದರು.