ಬಂಟ್ವಾಳ ತಾಲೂಕಿನ ಅಳಿಕೆ ಎಂಬಲ್ಲಿ ಯುವತಿಯೊಬ್ಬಳು 50 ಅಡಿಯ ಪಾಳುಬಾವಿಗೆ ಆಕಸ್ಮಿಕವಾಗಿ ಬಿದ್ದ ಘಟನೆ ಬುಧವಾರ ನಡೆದಿದ್ದು, ಫ್ರೆಂಡ್ಸ್ ವಿಟ್ಲ ಸಹಾಯದಿಂದ ಆಕೆಯನ್ನು ರಕ್ಷಿಸಲಾಯಿತು. ಬಳಿಕ ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಳಿಕೆ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ಘಟನೆ ನಡೆದಿದೆ. ಬಾವಿಯೊಳಗೆ ನರಳಾಡುತ್ತಿದ್ದ ಯುವತಿಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸಹಾಯದಿಂದ ಗಾಯಾಳು ಯುವತಿಯನ್ನು ಮೇಲಕ್ಕೆತ್ತಲಾಯಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…