ಮಾರಕಾಯುಧದಿಂದ ಸ್ವಂತ ಅಣ್ಱನನ್ನೇ ಹತ್ಯೆ ನಡೆಸಿದ ಆರೋಪದಲ್ಲಿ ತಮ್ಮನೀಗ ವಿಟ್ಲ ಪೊಲೀಸರ ವಶದಲ್ಲಿದ್ದಾನೆ.ಸೆ.13ರಂದು ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿ ಎಂಬಲ್ಲಿ ಘಟನೆ ನಡೆದಿದೆ. ಕೊಡಂಗೆ ಬನಾರಿ ಮನೆಯ ಶೀನಪ್ಪ ದೇವಾಡಿಗ ಅವರ ಪುತ್ರ ಗಣೇಶ್ ಬಂಗೇರ (54) ಸಾವನ್ನಪ್ಪಿದವರು. ಅವರ ಸಹೋದರ ಪದ್ಮನಾಭ ಬಂಗೇರ (49) ಆರೋಪಿ.
ಪೂರ್ವದ್ವೇಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ತನಿಖೆ ಸಾಗಿದೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಎಡಿಶನಲ್ ಎಸ್ಪಿ ಕುಮಾರ್ ಚಂದ್ರ, ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ, ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿದರು. ರಾತ್ರಿ ಸಮಯದಲ್ಲಿ ಪದ್ಮನಾಭ ಗಣೇಶ್ ಬಂಗೇರರವರನ್ನು ತಲೆ,ಎದೆ ಹಾಗೂ ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದು ಆ ಬಳಿಕ ಮೃತ ದೇಹದ ಬಟ್ಟೆಗಳನ್ನು ಹಾಗೂ ಮೃತ ದೇಹವನ್ನು ಸ್ವಚ್ಚಗೊಳಿಸಿ ಮಲಗುವ ಕೋಣೆಯ ಮಂಚದ ಮೇಲೆ ಮಲಗಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…