ಬಂಟ್ವಾಳ: ಸರಕಾರಿ ಶಾಲೆ ಅಭಿವೃದ್ಧಿಯಾಗಬೇಕಾದರೆ ಆ ಶಾಲೆಯ ಶಿಕ್ಷಕರು ಸಮುದಾಯದೊಂದಿಗೆ ಉತ್ತಮ ಸಂಬಂಧ ಹೊಂದಿ,ತಮ್ಮ ಶಾಲೆಯ ಅಭಿವೃದ್ಧಿಯ ಬಗ್ಗೆ ತುಡಿತವುಳ್ಳವರಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದರು
ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ನಡೆದ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಶಾಲೆಗೆ ವಾಹನ ಕೊಡುಗೆ ನೀಡಿದ ಮಧ್ಯಗುತ್ತು ಕರುಣಾಕರ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ರಾಧಾಕೃಷ್ಣ ತಂತ್ರಿ ಪೊಳಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಲಯನ್ಸ್ ಕ್ಲಬ್ ನ ಉಮೇಶ್ ಸಾಲ್ಯಾನ್, ಪುಷ್ಪರಾಜ್ ಶೆಟ್ಟಿ ಮಧ್ಯ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜೋಯಲ್ ಲೋಬೋ, ತೊಡಂಬಿಲ ಚರ್ಚ್ ಧರ್ಮಗುರುಗಳಾದ ರೆವರೆಂಡ್ ಫಾದರ್ ಆಂಟೊನಿ ಲೋಬೋ, ಪ್ರಾಂಶುಪಾಲೆ ಕವಿತಾ, ಮುಖ್ಯೋಪಾದ್ಯಾಯ ರಾಧಾಕೃಷ್ಣ ಭಟ್, ಶಿಕ್ಷಣ ಸಂಯೋಜನಾಧಿಕಾರಿ ಸುಜಾತ, ರಾಘವೇಂದ್ರ ಬಲ್ಲಾಳ್, ಉಷಾ ಸುವರ್ಣ, ವನಿತಾ, ನಂದಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಅನಂತಪದ್ಮನಾಭ ಸ್ವಾಗತಿಸಿದರು. ದೇವದಾಸ್ ವಂದಿಸಿದರು. ಶ್ರೀದೇವಿ ನಿರೂಪಿಸಿದರು. ಮೂರು ಕ್ಲಸ್ಟರ್ ನ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಇಪ್ಪತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ದಾನಿಗಳಿಗೆ ಹಾಗೂ ವಿವಿಧ ಶಾಲೆಯಿಂದ ಆಗಮಿಸಿದ ಶಿಕ್ಷಕರಿಗೆ ಮಾಂಡೊವಿ ಮೋಟರ್ಸ್ ಹಾಗೂ ಸರ್ವೋ ಕಂಪೆನಿ ಯವರು ನೀಡಿದ ಗಿಫ್ಟ್ ವಿತರಿಸಲಾಯಿತು.