ಆಶಾಕಿರಣ ಇಸ್ರೇಲ್ ಫ್ರೆಂಡ್ಸ್ ಗ್ರೂಪ್ ವತಿಯಿಂದ ತಾಲೂಕಿನ ಮೂರು ಬಡ ಕುಟುಂಬಗಳಿಗೆ ನೀಡಿದ ಆರ್ಥಿಕ ನೆರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸರ ಕಚೇರಿಯಲ್ಲಿ ಶನಿವಾರ ಹಸ್ತಾಂತರಿಸಿದರು. ಬೆನ್ನು ನೋವಿನಿಂದ ಬಳುತ್ತಿರುವ ಸಜೀಪ ಮುನ್ನೂರು ಗ್ರಾಮದ ದಳಂದಿಲ ಕೃಷ್ಣ ಪೂಜಾರಿ, ಕ್ಯಾನ್ಸರ್ ನಿಂದ ಸಾವನ್ನಪ್ಪಿದ ನರಿಕೊಂಬು ಗ್ರಾಮದ ಶಂಭೂರು ಕೊಪ್ಪಳ ನಿವಾಸಿ ಶೇಖರ ಅವರ ಪತ್ನಿ ವಾರಿಜಾ, ವೀರಕಂಭ ಗ್ರಾಮದ ಕಂಪದಬೈಲು ನಿವಾಸಿ ಮಮತಾ ಅವರ ಪುತ್ರಿ ಅಂಗವಿಕಲ ಬಾಲಕಿ ಮಹಾಲಕ್ಷ್ಮಿ ಅವರಿಗೆ ಆರ್ಥಿಕ ನೆರವು ನೀಡಲಾಗಿದೆ.
ಇಸ್ರೇಲ್ ದೇಶದಲ್ಲಿ ದುಡಿಯುವ ಕರಾವಳಿಯ ಕನ್ನಡಿಗರ ಸಹಾಯಹಸ್ತ ನೀಡುವ ಗುಂಪಾಗಿರುವ ಆಶಾಕಿರಣ ಇಸ್ರೇಲ್ ಇಸ್ರೇಲ್ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್ ಮೂಲಕ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 50 ಸಾವಿರ ರೂ ಗಳನ್ನು ನೀಡುತ್ತಿದ್ದು, ದಿನಕರ ಪುತ್ರನ್ ಎಂಬವರು ಇದನ್ನು ರಚಿಸಿದ್ದಾರೆ. ಆರಂಭದಲ್ಲಿ ಎಂಟು ಸದಸ್ಯರಿದ್ದ ಈ ಗ್ರೂಪ್ ಐದು ವರ್ಷಗಳಲ್ಲಿ 33ಕ್ಕೇರಿದೆ. ಈವರೆಗೆ 105 ಮಂದಿಗೆ ಆರ್ಥಿಕ ನೆರವನ್ನು ಈ ಗ್ರೂಪ್ ನೀಡಿದೆ.
(more…)