ಬಂಟ್ವಾಳ: ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬಿಎಂಎಸ್ ನ ಕಾರ್ಮಿಕ ಸೇವಾ ಕೇಂದ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಭಾರತೀಯ ಮಜ್ದೂರ್ ಸಂಘ ಬಿಸಿರೋಡ್ (ಬಂಟ್ವಾಳ) ತಾಲೂಕು ಕಚೇರಿ ಕಾರ್ಮಿಕರ ಸೇವಾ ಕೇಂದ್ರ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ ಅವರು ಬಂಟ್ವಾಳ ಕ್ಷೇತ್ರದಲ್ಲಿ 2018ರಿಂದ 2022ರವರೆಗೆ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಯಲ್ಲಿ ವೈದ್ಯಕೀಯ 89 ಅರ್ಜಿಗಳಲ್ಲಿ 8.90ಲಕ್ಷ , ಪಿಂಚಣಿ 179 ಅರ್ಜಿಗಳಲ್ಲಿ 3.58ಲಕ್ಷ , ಮದುವೆ 917 ಅರ್ಜಿಗಳಲ್ಲಿ 4.59ಕೋಟಿ, ಹೆರಿಗೆ 3 ಅರ್ಜಿಗಳಲ್ಲಿ 90ಸಾವಿರ, ಅಂತ್ಯ ಸಂಸ್ಕಾರ ವೆಚ್ಚ ಹಾಗೂ ಅನುಗ್ರಹ ರಾಶಿ 154 ಅರ್ಜಿಗಳಲ್ಲಿ 83.16ಲಕ್ಷ, ತಾಯಿ ಮಗು ಸಹಾಯಹಸ್ತ ಅರ್ಜಿಗಳಲ್ಲಿ 36 ಸಾವಿರ, ಶೈಕ್ಷಣಿಕ ಧನ ಸಹಾಯ 3766ರಲ್ಲಿ 2.30ಕೋಟಿ,ಈ ಸಲದ್ದು ಸೇರಿ ಒಟ್ಟು 10.01 ಕೋಟಿ ರೂಪಾಯಿ ಕ್ಲೈಮ್ ಮಾಡಲಾಗಿದೆ. ಕಾರ್ಮಿಕರಿಗೆ ಬಾರ್ ಬೆಂಡಿಂಗ್ ಕಿಟ್ 162, ಪೈಂಟಿಂಗ್ ಕಿಟ್ 638, ಪ್ಲಂಬರ್ ಟೂಲ್ ಕಿಟ್ 12, ಕಾರ್ಪೆಂಟರ್ ಟೂಲ್ ಕಿಟ್ 20, ಎಲೆಕ್ಟ್ರಿಷಿಯನ್ ಕಿಟ್ 30, ಆಹಾರ ಧಾನ್ಯಗಳ ಕಿಟ್ 10000, ಸುರಕ್ಷಾ ಕಿಟ್ 13475, ಇಮಿನಿಟಿ ಬೂಸ್ಟರ್ ಕಿಟ್ 6500, ಮೇಶನ್ ಕಿಟ್ 840 ವಿತರಿಸಲಾಗಿದೆ. ಕಾರ್ಮಿಕರಿಗಾಗಿ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದ್ದು ಮುಂದೆ ಕಟ್ಟಡ ಕಾರ್ಮಿಕರಿಗಾಗಿ ಮನೆ ಕಟ್ಟಲು ದೊರಕುವ ಸಹಾಯಧನ ದೊರಕಿಸಿ ಕೊಡುವಲ್ಲಿ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು.
ಬಿಎಂಎಸ್ ನ ಮಾಜಿ ರಾಜ್ಯಾಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ, ರಾಜ್ಯ ಬಿ ಎಂ ಎಸ್ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಹಾಗೂ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಪಿ.ಬಾಸ್ಕರ್ ರಾವ್ ಶುಭ ಹಾರೈಸಿದರು. ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ನ್ಯಾಯವಾದಿ ಜಯರಾಮ ರೈ, ಪ್ರಮುಖರಾದ ಸುಪ್ರೀತ್ ರೈ, ಸುರೇಶ್ ಕುಲಾಲ್, ನಾಗೇಶ್ ಸಾಲಿಯಾನ್, ವಿಶ್ವನಾಥ ಚಂಡ್ತಿಮಾರ್ , ದಿನೇಶ್ ಕನಪಾದೆ, ವಸಂತಕುಮಾರ್ ಮಣಿಹಳ್ಳ, ಸದಾನಂದ ಗೌಡ ಹಳೆಗೇಟು ಉಪಸ್ಥಿತರಿದ್ದರು.