SANDALWOOD QUEEN RAMYA IS BACK…ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿದ್ದ ರಮ್ಯಾ ಕೆಲ ವರ್ಷಗಳಿಂದ ರಾಜಕೀಯದಲ್ಲಿ, ಹೇಳಿಕೆಗಳನ್ನು ನೀಡುವುದರಲ್ಲಿ ಬ್ಯುಸಿ ಆಗಿದ್ದರು. ಕೆಲವೊಂದು ಹೇಳಿಕೆಗಳು ಸಾಕಷ್ಟು ಟೀಕೆ, ಟಿಪ್ಪಣಿಗಳಿಗೆ ಕಾರಣವೂ ಆಗಿತ್ತು. ಆದರೂ ಸಿನಿಮಾಗಳಲ್ಲಿ ನಟಿಸುವ ಕುರಿತು ರಮ್ಯಾ ಯಾವುದೇ ಕಮೆಂಟ್ ಗಳನ್ನು ಮಾಡಿರಲಿಲ್ಲ. ಇದೀಗ ಸಿಹಿ ಸುದ್ದಿ ಕೊಡ್ತೇನೆ ಎಂದು ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದ ರಮ್ಯಾ ಮದುವೆ ಆಗುತ್ತಾರೆ ಎಂದೇ ಭಾವಿಸಿದ್ದರು. ಚೌತಿಯನ್ನು ಗುಟ್ಟು ಬಿಟ್ಟುಕೊಡುವೆ ಎಂದಿದ್ದ ರಮ್ಯಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಹಂಚಿದ್ದಾರೆ. ಅದೇನು ಗೊತ್ತೇ?
ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಆದ ನಟಿ ರಮ್ಯಾ ರಾಜಕೀಯದಲ್ಲಿ ಅಂತಹ ಯಶಸ್ಸೇನೂ ಕಾಣಲಿಲ್ಲ. ಆದರೆ ಈಗ ನಿರ್ಮಾಪಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಹೊಸ ಪ್ರೊಡಕ್ಷನ್ ಸ್ಟುಡಿಯೋಸ್ ಮೂಲಕ ನಟಿ ಸಿನಿಮಾಗೆ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ. ಅದರ ಹೆಸರು ಆಪಲ್ ಬಾಕ್ಸ್ ಸ್ಟುಡಿಯೋಸ್..
ಸರಿಸುಮಾರು ರಮ್ಯಾ ಎಂಟ್ರಿಯಾಗುವ ಹೊತ್ತಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಾಧಿಕಾ ಬಳಿಕ ನಿರ್ಮಾಪಕಿಯಾಗಿದ್ದರು. ರಕ್ಷಿತಾ ಪ್ರೇಮ್ ಮದ್ವೆ ಆದ ಮೇಲೆ ಸಿನಿಮಾ ಕಡೆ ಕಾಲಿಟ್ಟಿಲ್ಲ. ಮೂರು ಆರ್. ಗಳ ಪೈಕಿ ಮೂವರೂ ಸಿನಿಮಾದಿಂದ ದೂರ ಸರಿಯುತ್ತಿರುವ ಹೊತ್ತಿನಲ್ಲೇ ರಮ್ಯಾ ಹೊಸ ಅವತಾರ ನಿರೀಕ್ಷೆ ಹುಟ್ಟಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…