ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕೇಪು ವಲಯದ ಚೈತನ್ಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ. ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ದಯಾನಂದ ಎಸ್ ನಾಯಕ್ ಅಧ್ಯಕ್ಷತೆಯಲ್ಲಿ ಜರಗಿತು.
ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಸತ್ಯವತಿ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾಕ ಪ್ರವೀಣರಾದ ಸವಿತಾ ಎಸ್. ಭಟ್ ಸಿರಿ ಧಾನ್ಯ ಬಳಕೆ ಯ ಬಗ್ಗೆ ತಿಳಿಸಿದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ಪ್ರಾಸ್ತಾವಿಕ ಮಾತನಾಡಿ ,ಸೇವಾ ಪ್ರತಿನಿಧಿ ಗುಲಾಬಿ ವರದಿ ಮಂಡನೆ ಮಾಡಿದರು.
ಪ್ರತಿಮಾ ಸ್ವಾಗತಿಸಿ ಸಂಯೋಜಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಸದಸ್ಯರು ಮಾಡಿದ ವಿವಿಧ ರೀತಿಯ ಸಿರಿಧಾನ್ಯ ಆಹಾರ ಹಾಗೂ ಅದರ ಬಗ್ಗೆ ವಿವರಣೆ ನೀಡಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.