ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ದ.ಕ. ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.31ರಿಂದ ಸೆ.4ರ ಭಾನುವಾರದವರೆಗೆ ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ನಡೆಯಲಿದೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸರ್ವಧರ್ಮದ ಭಗವದ್ಭಕ್ತರೊಂದಿಗೆ ಅರ್ಥಪೂರ್ಣವಾಗಿ ಮತ್ತು ವೈಭವಯುತವಾಗಿ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭಾನುವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಗಣೇಶೊತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವೈದ್ಯ, ಸ್ಥಳದಾನಿ ಡಾ. ಶಿವಪ್ರಸಾದ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ನಿತ್ಯ ಅನ್ನಸಂತರ್ಪಣೆ, ಭಜನೆ, ತುಳು ನಾಟಕಗಳು, ಯಕ್ಷಗಾನ ಕಾರ್ಯಕ್ರಮಗಳು ಇರಲಿವೆ. ಕಲಾ ತಂಡಗಳು, ಸ್ತಬ್ದ ಚಿತ್ರಗಳೊಂದಿಗೆ ಶೋಭಾಯಾತ್ರೆ ಇರಲಿದೆ. ಸಭೆಗಳಲ್ಲಿ ಧಾರ್ಮಿಕ ಕ್ಷೇತ್ರದ ಸಾಧುಸಂತರು, ಮಠಾಧೀಶರು, ರಾಜಕೀಯ ನೇತಾರರು, ಧರ್ಮಗುರುಗಳು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು. 32 ಭಜನಾ ತಂಡಗಳಿಂದ ಭಜನಾ ಸೇವೆ ಇರಲಿರುವುದು ಈ ಬಾರಿಯ ವಿಶೇಷ ಎಂದವರು ತಿಳಿಸಿದರು.
ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ವಿವಿಧ ಪದಾಧಿಕಾರಿಗಳಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪದ್ಮನಾಭ ರೈ, ಜನಾರ್ದನ ಚಂಡ್ತಿಮಾರ್, ರಾಜೀವ ಶೆಟ್ಟಿ ಎಡ್ತೂರು, ಬೇಬಿ ಕುಂದರ್, ಸಂಪತ್ ಕುಮಾರ್ ಶೆಟ್ಟಿ, ಸುಧಾಕರ ರೈ, ಮಹಾಬಲ ಬಂಗೇರ, ಪ್ರವೀಣ್ ಜಕ್ರಿಬೆಟ್ಟು, ಸುರೇಶ್ ಜೋರ, ಲೋಲಾಕ್ಷ ಟಿ, ಉಮೇಶ್ ಕುಲಾಲ್, ಶಬೀರ್ ಸಿದ್ದಕಟ್ಟೆ, ಚಂದ್ರಶೇಖರ ಶೆಟ್ಟಿ, ವೆಂಕಪ್ಪ ಪೂಜಾರಿ, ರಾಜೀವ ಕಕ್ಯಪದವು, ಪದ್ಮನಾಭ ಸಾಮಂತ್, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸುದೀಪ್ ಕುಮಾರ್ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಸುಧಾಕರ ಶೆಣೈ, ಉಪಸ್ಥಿತರಿದ್ದರು.