ಬಂಟ್ವಾಳ

31ರಿಂದ ಸೆಪ್ಟಂಬರ್ 3ರವರೆಗೆ 43ನೇ ವರ್ಷದ ಬಿ.ಸಿ.ರೋಡು ಗಣೋಶೋತ್ಸವ

ಬಂಟ್ವಾಳ : ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ೪೩ನೇ ವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅಗಸ್ಟ್ 31ರಿಂದ ಸೆಪ್ಟಂಬರ್ 3ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಕ್ತೇಶ್ವರಿ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ನಡೆಯಲಿರುವುದು.

ಅಗಸ್ಟ್ 31ರಂದು ಬೆಳಿಗ್ಗೆ ಬಂಟ್ವಾಳದಿಂದ ಮೂರ್ತಿ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನಾ ಗಣಹೋಮ ನಡೆಯಲಿರುವುದು. ಸಂಜೆ 4ರಿಂದ 6ರ ವರೆಗೆ ಶ್ರೀ ರಾಮ ಭಜನಾ ಮಂದಿರ ಬಂಟ್ವಾಳ ಇವರಿಂದ ಭಜನೆ ನಡೆಯಲಿರುವುದು. ಸಂಜೆ 6ರಿಂದ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್‌ನ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆಯರಿಂದ ನೃತ್ಯ ಸಿಂಚನ ಭರತನಾಟ್ಯ ನಡೆಯಲಿರುವುದು. ಸೆಪ್ಟಂಬರ್ 1ರಂದು ಸಂಜೆ ೪ರಿಂದ ಸತ್ಯಸಾಯಿ ಸೇವಾ ಕೇಂದ್ರ ಜೋಡುಮಾರ್ಗ ಇವರಿಂದ ಭಜನೆ ನಡೆಯಲಿರುವುದು. ಸಂಜೆ 6ರಿಂದ ಸುಮನಸ ಯಕ್ಷ ಬಳಗ ಬಂಟ್ವಾಳ ಇವರ ಸದಸ್ಯರಿಂದ ಯೋಗೀಶ್ ಶರ್ಮ ಅಳದಂಗಡಿ ಮಾರ್ಗದರ್ಶನದಲ್ಲಿ ಯಕ್ಷ ಗಾನ ವೈಭವ ಮತ್ತು ಗಣೇಶೋದ್ಭವ ಯಕ್ಷಗಾನ ಬಯಲಾಟ ನಡೆಯಲಿರುವುದು. ಸೆಪ್ಟಂಬರ್ 2ರಂದು ಕೂಟ ಮಹಾಜಗತ್ತು ಸಾಲಿಗ್ರಾಮ ಬಂಟ್ವಾಳ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಸಂಜೆ 6ರಿಂದ ಚಾಪರ್ಕ ತಂಡ ದೇವದಾಸ ಕಾಪಿಕಾಡ್ ನಿರ್ದೇಶನದ ನಮಸ್ಕಾರ ಮಾಸ್ಟ್ರೇ ನಾಟಕ ನಡೆಯಲಿರುವುದು. ಸೆಪ್ಟೆಂಬರ್ 3ರಂದು ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 3.30ಕ್ಕೆ ಬಿ.ಸಿ.ರೋಡು ಎಸ್. ಎನ್. ಹೊಳ್ಳ ಚಿಲಿಪಿಲಿ ಬಳಗದವರಿಂದ ಗೊಂಬೆ ಕುಣಿತ, ಮಹಾಪೂಜೆ, ರಂಗಪೂಜೆ, ಹಾಗೂ ವಿಸರ್ಜನಾ ಪೂಜೆಯ ಬಳಿಕ ಶೋಭಾಯಾತ್ರೆಯು ಬಿ.ಸಿ.ರೋಡು, ಕೈಕಂಬ, ತಲಪಾಡಿ, ಗಣಪತಿ ಕಟ್ಟೆಯಿಂದ ತಿರುಗಿ, ಮೊಡಂಕಾಪು, ಬಿ.ಸಿ.ರೋಡು, ಮಯ್ಯರಬೈಲು, ಭಂಡಾರಿಬೆಟ್ಟು, ಬಂಟ್ವಾಳ ನೆರೆ ವಿಮೋಚನಾ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನದಿಯಲ್ಲಿ ವಿಸರ್ಜನೆಯಾಗುವುದು ಎಂದು ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಎಮ್. ಸತೀಶ್ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts