ಬಂಟ್ವಾಳ: ಆಗಸ್ಟ್ 27ರಿಂದ 29ರವರೆಗೆ ಬಂಟ್ವಾಳದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲೆಯ 24ನೇ ಸಮ್ಮೇಳನ ನಡೆಯಲಿದೆ ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಹೇಳಿದರು.
ಈ ಕುರಿತು ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 29ರಂದು ಬಿ.ಸಿ.ರೋಡ್ ಕೈಕಂಬದ ಬಳಿಯಲ್ಲಿ ಸಾರ್ವಜನಿಕರು ಒಟ್ಟು ಸೇರಿ ಬಿ.ಸಿ.ರೋಡ್ ವೃತ್ತ ಬಳಿಯ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣಕ್ಕೆ ವರ್ಣರಂಜಿತ ರ್ಯಾಲಿ ನಡೆಸಲಿದ್ದಾರೆ. ಬಿ.ವಿಶ್ವನಾಥ ನಾಯ್ಕ್ ನಗರದ ಎಸ್.ಚಂದಪ್ಪ ಅಂಚನ್ ಸಭಾಂಗಣದ ಪಿ.ಸಂಜೀವ ವೇದಿಕೆಯಲ್ಲಿ ಬೆಳಗ್ಗೆ 11ರಿಂದ ನಡೆಯುವ ಬಹಿರಂಗ ಸಭೆಯನ್ನು ಸಿಪಿಐ ಕಣ್ಣೂರು ಜಿಲ್ಲಾ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಸಂದೋಷ್ ಕುಮಾರ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ. ಸಿದ್ಧನಗೌಡ ಪಾಟೀಲ ಭಾಗವಹಿಸುವರು.
ಪ್ರಮುಖರಾದ ಸಿದ್ಧತಾ ಸಮಿತಿ ಅಧ್ಯಕ್ಷ ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಸಂಚಾಲಕ ಬಾಬು ಭಂಡಾರಿ ಮತ್ತಿತರರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ದ.ಕ., ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ವಹಿಸುವರು ಎಂದರು. ಆ.27 ಮತ್ತು 28ರಂದು ಪ್ರತಿನಿಧಿ ಸಮ್ಮೇಳನ ಬಂಟ್ವಾಳದ ಕಾಮ್ರೆಡ್ ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದರು.
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಆ.28ರ ಭಾನುವಾರ ಸಂಜೆ 4 ಗಂಟೆಗೆ ಬಂಟ್ವಾಳ ಬೈಪಾಸ್ ನಲ್ಲಿರುವ ಪಕ್ಷದ ಕಚೇರಿಯಿಂದ ಬೈಕ್ ರ್ಯಾಲಿ ನಡೆಯಲಿದ್ದು, ಪಾಣೆಮಂಗಳೂರು ಮೂಲಕ ಗೂಡಿನಬಳಿಯಿಂದ ಬಿ.ಸಿ.ರೋಡ್ ವೃತ್ತದಿಂದ ಬಿ.ಸಿ.ರೋಡ್ ಪೇಟೆ ಮೂಲಕ ಕೈಕಂಬ ಜಂಕ್ಷನ್ ಪೊಳಲಿ ದ್ವಾರದವರೆಗೆ ಬಂದು ಸಮಾಪ್ತಿಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ದ.ಕ., ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್, ವಿ.ಎಸ್.ಬೇರಿಂಜ, ಎಂ.ಕರುಣಾಕರ್, ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…