ಬಂಟ್ವಾಳ

ನವಬಂಟ್ವಾಳ ಸಂಕಲ್ಪದೊಂದಿಗೆ ಶಾಸಕ ರಾಜೇಶ್ ನಾಯ್ಕ್ ಅವರಿಂದ 102.5 ಕೋಟಿ ರೂ ಅನುದಾನದ ಕಾಮಗಾರಿಗೆ ಚಾಲನೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಇಂದು ಕ್ಷೇತ್ರದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಕ್ಷೇತ್ರದಲ್ಲಿ ಗ್ರಾಮೀಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ 102.5 ಕೋಟಿ ರೂ.ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರದ 56 ಗ್ರಾಮಗಳ 253 ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ವಿವಿಧ ಗ್ರಾಮಗಳಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಈಗಾಗಲೇ ಕ್ಷೇತ್ರದಲ್ಲಿ1400 ಗ್ರಾಮೀಣ ಭಾಗದ ರಸ್ತೆಗಳನ್ಮು ಅಭಿವೃದ್ದಿ ಪಡಿಸಲಾಗಿದ್ದು,ಇನ್ನುಳಿದ ರಸ್ತೆಗಳ ಅಭಿವೃದ್ದಿಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ಸಣ್ಣ ನೀರಾವರಿ ಇಲಾಖೆಯಿಂದ 250 ಕೋ.ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗಳ ಪೈಕಿ ಕೆಲವು ಪೂರ್ಣಗೊಂಡಿದ್ದು,ಇನ್ನು ಕೆಲವು ಪ್ರಗತಿಯಲ್ಲಿದೆ ಎಂದರು. ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಒಳಚರಂಡಿ ಯೋಜನೆ,ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ 132 ಕೋ.ರೂ.ವಿನಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದೆ .ಪುಂಜಾಲಕಟ್ಟೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ವಸತಿ ಶಾಲೆ ಸಹಿತ ಅಲ್ಪಸಂಖ್ಯಾತ ವಸತಿ ಶಾಲೆಗಳ ನಿರ್ಮಾಣಕ್ಕೆ ಶೀಘ್ರವೇ ಮುಖ್ಯಮಂತ್ರಿಯವರಿಂದಲೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದ ಶಾಸಕರು ಅಭಿವೃದ್ದಿ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ 2024 ರಲ್ಲಿ ಬಂಟ್ವಾಳ ಕ್ಷೇತ್ರದ ಪ್ರತಿ ಮನೆಗೂ ಕುಡಿಯುವ ನಳ್ಳಿ ನೀರು ಪೂರೈಕೆಯಾಗುವ ಮೂಲಕ ಬಂಟ್ವಾಳ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್
ತಿಳಿಸಿದರು.

ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುದರ್ಶನ ಬಜ, ರಮನಾಥ ರಾಯಿ,  ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ರಾಮದಾಸ್ ಬಂಟ್ವಾಳ, ಕಮಲಾಕ್ಷಿ ಕೆ.ಪೂಜಾರಿ, ಪ್ರಭಾಕರ್ ಪ್ರಭು, ಪುಷ್ಪರಾಜ ಚೌಟ,  ಉಮೇಶ್ ಅರಳ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ,  ನಾರಾಯಣ ಪೂಜಾರಿ ದೆಚ್ಚಾರ್,  ಪುರುಷೋತ್ತಮ ಸಾಲಿಯಾನ್ ನರಿಕೊಂಬು, ರವಿ ಶೆಟ್ಟಿ ಕೈಯಾಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಯಶವಂತ ನಗ್ರಿ, ರಂಜಿತ್ ಮೈರ, ಯಶವಂತ ದೇರಾಜೆ, ರೋನಾಲ್ಡ್ ಡಿ.ಸೋಜ ಅಮ್ಟಾಡಿ, ಧನಂಜಯ ಶೆಟ್ಟಿ ಸರಪಾಡಿ, ಉದಯಕುಮಾರ್ ರಾವ್,  ಚರಣ್ ಜುಮಾದಿಗುಡ್ಡೆ, ಪ್ರದೀಪ್ ಅಜ್ಜಿಬೆಟ್ಟು, ಲಕ್ಷಣ್ ರಾಜ್ ಬಿ.ಸಿ.ರೋಡು, ಪುರುಷೋತ್ತಮ ಪೂಜಾರಿ,  ಪ್ರೇಮನಾಥ ಶೆಟ್ಟಿ, ಮಾಧವ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಕುಮಾರ್ ಭಟ್ ಕನ್ಯಾನ, ನಂದರಾಮ ರೈ, ದಿನೇಶ್ ಶೆಟ್ಟಿ ದಂಬೆದಾರ್, ಸತೀಶ್ ಶೆಟ್ಟಿ, ಶರ್ಮಿತ್ ಜೈನ್,  ಶಶಿಕಾಂತ್ ಶೆಟ್ಟಿ, ಉದಯಕುಮಾರ್ ಕಾಂಜಿಲ, ಮಾಧವ ಮಾವೆ . ಮೋಹನ್ ಪಿ.ಎಸ್. ಪುತ್ತುಮೋನು ನಂದಾವರ, ಡಾ.ಆತ್ಮರಂಜನ್ ರೈ, ಎಂ.ಎನ್.ಕುಮಾರ್ ಮೆಲ್ಕಾರ್, ಜನಾರ್ದನ ಬೊಂಡಾಲ, ಜಯರಾಮ ನಾಯ್ಕ್, ಆನಂದ ಎ.ಶಂಭೂರು, ಸುರೇಶ್ ಕೋಟ್ಯಾನ್, ವಿವಿಧ ಗ್ರಾ.ಪಂ.ಅಧ್ಯಕ್ಷರುಗಳಾದ ಸುರೇಶ್ ಮೈರ, ಲಕ್ಷ್ಮೀಧರ ಶೆಟ್ಟಿ,ವಿನುತ ಪುರುಷೋತ್ತಮ, ಲೀಲಾವತಿ, ದಿನೇಶ್ ಪೂಜಾರಿ, ರೇಶ್ಮಾ ಶಂಕರಿ ಬಳಿಪಗುಳಿ,ಪುಷ್ಪಾ ಎಸ್.ಕಾಮತ್ , ಅಭಿಷೇಕ್ ಶೆಟ್ಟಿ,  ಉಪಾಧ್ಯಕ್ಷರಾದ ಪ್ರಕಾಶ್ ಮಡಿಮೊಗರು, ಮೋಹನ್ ದಾಸ ಶೆಟ್ಟಿ, ರಶ್ಮೀತ್ ಶೆಟ್ಟಿ ಕೈತ್ರೋಡಿ, ನಾಗೇಶ್ ಶೆಟ್ಟಿ, ಯಶೋಧರ ಚೌಟ, ಸುಕೇಶ್ ಚೌಟ, ಕಿಶೋರ್ ಪಲ್ಲಿಪಾಡಿ, ಬಾಲಕೃಷ್ಣ ಸೆರ್ಕಳ, ಸಾಂತಪ್ಪ ಪೂಜಾರಿ, ಶರ್ಮಿತ್ ಜೈನ್, ಕಾರ್ತಿಕ್ ಬಳ್ಳಾಲ್, ಪ್ರೇಮನಾಥ ಶೆಟ್ಟಿ, ಕಿಶೋರ್ ಶೆಟ್ಟಿ, ಮಾಧವ ಕರ್ಬೆಟ್ಟು, ಧನಂಜಯ ಶೆಟ್ಟಿ, ಯಶವಂತ ನಾಯ್ಕ್, ಸುಪ್ರೀತ್ ಆಳ್ವ, ಗಿರಿಪ್ರಕಾಶ್ ತಂತ್ರಿ, ಲೋಕೇಶ್ ಭರಣೆ, ಚಂದ್ರಾವತಿ ದೇವಾಡಿಗ, ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಪರಮೇಶ್ವರ ಭಟ್,  ಕೆ. ರಾಮ್ ಭಟ್, ರಾಧಕೃಷ್ಣ ತಂತ್ರಿ ಪೊಳಲಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ಲೋಕೋಪಯೋಗಿ ಎಇಇ ಜಯಪ್ರಕಾಶ್, ಗುತ್ತಿಗೆದಾರರಾದ ಎ.ಎಚ್.ಖಾದರ್, ಧೀರಜ್ ನಾಯ್ಕ್ ಹಾಗೂ ಗ್ರಾ.ಪಂ.ಸದಸ್ಯರು,ಪಿಡಿ.ಒ.ಗಳು,ಪಕ್ಷದ ಸ್ಥಳೀಯ ಮುಖಂಡರು,ಕಾರ್ಯಕರ್ತರು,  ಉಪಸ್ಥಿತರಿದ್ದರು.  ವಿವಿಧೆಡೆ ನಡೆದ ಶಿಲಾನ್ಯಾಸ ಕಾರ್ಯಗಳ ಚಿತ್ರಗಳು ಇಲ್ಲಿವೆ.

ರೂ 4.95 ಕೋಟಿ ಅನುದಾನದಲ್ಲಿ ನರಿಕೊಂಬು-ದಾಸಕೋಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ರೂ 4.95 ಕೋಟಿ ಅನುದಾನದಲ್ಲಿ ಬಹುಬೇಡಿಕೆಯ ಸುಧೆಕ್ಕಾರು-ಕಕ್ಕೆಮಜಲು-ಕಾಪಿಕಾಡು-ಇರಂತಬೆಟ್ಟು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಪೊಳಲಿ

ರೂ 2 ಕೋಟಿ ಅನುದಾನದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ
ರೂ 1.50 ಕೋಟಿ ಅನುದಾನದಲ್ಲಿ ಕೋಡಪದವು-ಮಂಗಳಪದವು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು
ನರಹರಿ ಶ್ರೀ ಸದಾಶಿವ ದೇವಸ್ಥಾನದ ಸಂಪರ್ಕ ರಸ್ತೆ 2 ಕೋಟಿ ರೂ,ಕಲ್ಲಡ್ಕ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ಸಂಪರ್ಕ ರಸ್ತೆ 3 ಕೋಟಿ ರೂ ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ರೂ 17.40 ಕೋಟಿ ಅನುದಾನದಲ್ಲಿ ಮಾರ್ನಬೈಲು-ಮೆಲ್ಕಾರ್,ಮಾರ್ನಬೈಲ್-ಮಂಚಿ-ಸಾಲೆತ್ತೂರು ಹಾಗೂ ಬೊಳ್ಳಾಯಿ-ಕಂಚಿಲ-ಮಂಚಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ‌ ಶಿಲಾನ್ಯಾಸ ನೆರವೇರಿಸಲಾಯಿತು.
ರೂ 7 ಕೋಟಿ ಅನುದಾನದಲ್ಲಿ ಕುಂಟಾಲಪಲ್ಕೆ-ಉಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ರೂ 3 ಕೋಟಿ ಅನುದಾನದಲ್ಲಿ ಬಹುಬೇಡಿಕೆಯ ಸರಪಾಡಿ-ಪೆರ್ಲ-ಬಿಯಪಾದೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ರೂ 7 ಕೋಟಿ ವೆಚ್ಚದಲ್ಲಿ ಮಣಿಹಳ್ಳ ನಾವೂರ, ಸರಪಾಡಿ ರಸ್ತೆಗೆ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
2 ಕೋಟಿ ರೂ ಅನುದಾನದಲ್ಲಿ ಅಣ್ಣಳಿಕೆ – ರಾಯಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು
ರೂ 5.35 ಕೋಟಿ ವೆಚ್ಚದಲ್ಲಿ ಸೋರ್ನಾಡು – ಮೂಲರಪಟ್ನ ಮತ್ತು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಕಾಂಕ್ರೀಟ್ ರಸ್ತೆಗೆ ಅರ್ಚಕರಾದ ಹರೀಶ್ ಭಟ್ ದಿವ್ಯಹಸ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ