ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಶನಿವಾರ ಗೋಳ್ತಮಜಲು ಗ್ರಾಮದಲ್ಲಿ ನಡೆಯಿತು.
ಕಲ್ಲಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಹಿತ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ, ಅಹವಾಲುಗಳನ್ನು ಸ್ಥಳೀಯ ಗ್ರಾಮಸ್ಥರು ಸಲ್ಲಿಸಿದರು. ಕೆಲವು ಕೆಲಸ ಕಾರ್ಯಗಳು ಅರ್ಜಿ ನೀಡಿ ಸಾಕಷ್ಟು ದಿನಗಳು ಕಳೆದಿದ್ದರೂ ಆಗಿರದ ವಿಚಾರದ ಕುರಿತು ಸಾರ್ವಜನಿಕರು ಗಮನ ಸೆಳೆದರು. ರೇಷನ್ ಕಾರ್ಡ್ ಸಮಸ್ಯೆ, ಫಲಾನುಭವಿಗಳಿಗೆ ಅದರ ಲಾಭಗಳು ಸಿಗದೇ ಇರುವುದು, ಜಾಗದ ಸಮಸ್ಯೆ ಸಹಿತ ಸ್ಥಳೀಯ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಗಮನ ಸೆಳೆದರು.
ಗ್ರಾಪಂ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಪ್ರಭು, ಸ್ಥಳೀಯ ಪ್ರಮುಖರಾದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪ್ರಮುಖರಾದ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು, ಉಪತಹಸೀಲ್ದಾರ್ ನವೀನ್ ಬೆಂಜನಪದವು, ದಿವಾಕರ ಮುಗಳಿಯ, ಗ್ರೆಟ್ಟಾ ಮಸ್ಕರೇನ್ಹಸ್, ಪಿಡಿಒ ವಿಜಯ ಶಂಕರ್ ಆಳ್ವ, ಕಂದಾಯ ನಿರೀಕ್ಷಕ ವಿಜಯ್.ಆರ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಪ್ರಶಾಂತ್, ಆಥಿಕ್, ಯಶ್ವಿತ, ಸ್ವಾತಿ, ವಿಜೇತ, ಅಶ್ವಿನಿ ಸಿಬ್ಬಂದಿ ವೆಂಕಟರಮಣ, ಮೋಹನ್ ದಾಸ್, ಸದಾಶಿವ ಕೈಕಂಬ, ಶಿವಪ್ರಸಾದ್ ಹಾಜರಿದ್ದರು.