ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆ, ಪಿಯೂಸ್ ಎಲ್. ರೋಡ್ರಿಗಸ್ ಅಧ್ಯಕ್ಷತೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಟಿದ ಕೂಟ ಸಮಿತಿ ವತಿಯಿಂದ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಭಾನುವಾರ ಆಟಿಡ್ ಕೆಸರ್ಡ್ ಒಂಜಿ ದಿನ ಎಂಬ ಕಾರ್ಯಕ್ರಮ ನಡೆಯಿತು.
ಬಾಲೇಶ್ವರ ಬಸದಿಯಲ್ಲಿ ಪೂಜೆ ಸಲ್ಲಿಸಿ, ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಟದ ಗದ್ದೆಯಲ್ಲಿ ಕಂಬಳ ಕೋಣ ಇಳಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆಯನ್ನು ನೀಡಿದ ಮಾಜಿ ಸಚಿವ ರೈ, ಬಳಿಕ ವೇದಿಕೆಯಲ್ಲಿ ಗಣ್ಯರ ಸಮಕ್ಷಮ ಹಿಂಗಾರ ಅರಳಿಸಿದರು.
ಸಾಮಾಜಿಕ ಪರಿವರ್ತನೆ ಬಳಿಕ ಉತ್ತಮ ಜೀವನ ಸಾಗಿಸುತ್ತಿದ್ದು, ಹಿಂದಿನ ನೆನಪು ಮರೆಯಬಾರದು ಎಂಬ ಕಾರಣಕ್ಕೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ರಮಾನಾಥ ರೈ ಆಶಯ ನುಡಿಗಳನ್ನಾಡಿದರು.
ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಪ್ರಾಸ್ತಾವಿಕ ಮಾತನಾಡಿ, ತುಳುನಾಡ ಒಗ್ಗಟ್ಟಿಗೆ ಮಾಜಿ ಸಚಿವ ರಮಾನಾಥ ರೈ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ, ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭ ಇತಿಹಾಸವನ್ನು ನೆನಪಿಸುವ ಕೆಲಸ ಆಗಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ದೇವಪ್ಪ ಕುಲಾಲ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಮತಾ ಡಿ.ಎಸ್. ಗಟ್ಟಿ, ಎಂ.ಎಸ್. ಮಹಮ್ಮದ್, ಮಲ್ಲಿಕಾ ಪಕ್ಕಳ, ಜಯಂತಿ ಪೂಜಾರಿ, ಅಮ್ಮು ರೈ, ಅಬ್ಬಾಸ್ ಆಲಿ ಬೋಳಂತೂರು, ರಮೇಶ್ ನಾಯಕ್ ರಾಯಿ, ಎಡ್ತೂರು ರಾಜೀವ ಶೆಟ್ಟಿ, ಪದ್ಮನಾಭ ರೈ, ಸುರೇಶ್ ಜೋರ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ಸೀತಾರಾಮ ಶೆಟ್ಟಿ ಕಾಂತಾಡಿ, ದಿನೇಶ್ ಶೆಟ್ಟಿ, ಕೇಶವ ಪೂಜಾರಿ, ಪದ್ಮರಾಜ ಬಲ್ಲಾಳ್, ಸದಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ಮೋಹನ ಗೌಡ ಕಲ್ಮಂಜ, ಗಂಗಾಧರ ಪೂಜಾರಿ, ಲೋಲಾಕ್ಷ ಶೆಟ್ಟಿ, ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಆಟೋಟ, ಖಾದ್ಯ ವೈವಿಧ್ಯ: ತುಳುನಾಡ ಪರಂಪರೆಯ ಖಾದ್ಯ ವೈವಿಧ್ಯದೊಂದಿಗೆ ಪಾರಂಪರಿಕ ಆಟೋಟಗಳು ಇತ್ತು. ಸಂಗೀತಕುರ್ಚಿ, ಶೂಟಿಂಗ್ ದ ವಿಕೆಟ್, ಕೆಸರುಗದ್ದೆ ಓಟ, ಲಿಂಬೆ ಚಮಚ ಓಟ, ಪಾಡ್ದನ ಹೆಳುವ ಸ್ಪರ್ಧೆ, ಹಿಮ್ಮುಖ ಓಟ, ನೀರಿನ ಕೊಡ ಸೊಂಟದಲ್ಲಿಟ್ಟು ಓಟ, ಮಡಲು ಹೆಣೆಯುವುದು, ಮಡಿಕೆ ಹೊಡೆಯುವುದು, ಕಾರುಕಂಬ್ಳ ಓಟ, ಅಂತರ್ ಪಂಚಾಯತ್ ತಂಡಗಳ ನಡುವೆ ಹಗ್ಗ ಜಗ್ಗಾಟ, ಬಾಲ್ ಎಸೆತ, ಉರಾಳ್ ಹಾಕುವುದು, ಅಡಿಕೆ ಹಾಳೆಯಲ್ಲಿ ಎಳೆತ, ದಂಪತಿಗೆ ಕ್ರೇಝಿ ಗೇಮ್ಸ್, ತಪ್ಪಂಗಾಯಿ ಓಟ, ತೆಂಗಿನಕಾಯು ಉರುಳಿಸುವುದು ಆಟಗಳಲ್ಲಿ ಪಾಲ್ಗೊಂಡರು. ಬೆಳಗ್ಗೆ ನಾಚಿಗೆ ಮುಳ್ಳು ಕಷಾಯ, ಬೇಂಗದ ಕೆತ್ತೆ ಕಷಾಯ, ಪತ್ರೊಡೆ, ಪದೆಂಜಿ ಉಪ್ಪುಕರಿ, ಪೆಲಕಾಯಿ ಗಟ್ಟಿ, ಮಧ್ಯಾಹ್ನ ಕಣಿಲೆ ಉಪ್ಪಡ್, ಚೇವು ಸೋನೆ ಸೊಪ್ಪು ಚಟ್ನಿ, ಉಪ್ಪಡ್ ಪಚ್ಚಿಲ್ ಪಲ್ಯ, ಕುಡುತ ಸಾರ್, ಕರಿಚೇವು ಅಂಬಡೆ ಗಸಿ, ಪೂಂಬೆ ಚಟ್ನಿ, ತಜಂಕ್ ಪೆಲತರಿ ಸುಕ್ಕ, ಕಂಚಲ್ ಪೀರೆ ಪೋಡಿ, ಕಜೆ ಅರಿ ನುಪ್ಪು, ಪೆಲಕಾಯಿ ಪಾಯಸ, ಸಂಜೆ ಪೆಲಕಾಯಿ ಗಾರಿ, ಪತ್ರೊಡೆ ಉಪ್ಪುಕರಿ, ರಾಗಿ ಮಣ್ಣಿ, ಕಡುಬು ಮಂಜಲ್ ಇರೆತ ಗಟ್ಟಿ, ತಜಂಕ್ ಅಂಬಡೆ, ಈಂದ್ ಹುಡಿ ಕಷಾಯ ಇತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…