ಶನಿವಾರ ಬಿ.ಸಿ.ರೋಡ್ ನಲ್ಲಿ ತಿರಂಗಾ ಸಂಭ್ರಮ. ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಸವಿನೆನಪಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ರಾಷ್ಟ್ರಧ್ವಜದೊಂದಿಗೆ ವೈಭವದ ಮೆರವಣಿಗೆ, ಗಾನ ನುಡಿ ನಮನ.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬಂಟ್ವಾಳದ ಬಂಟರ ಭವನದವರೆಗೆ ಮೆರವಣಿಗೆ ಸಾಗಿದ ಬಳಿಕ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಅವರಿಂದ ಕರಾವಳಿಯ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಮಾಹಿತಿ. ಅದಾದ ಬಳಿಕ ಜಗದೀಶ್ ಪುತ್ತೂರು ಮತ್ತು ಅವರ ತಂಡದ ಸಹಗಾಯಕಿಯರಾದ ಪಲ್ಲವಿ ಪ್ರಭು ಮತ್ತು ಜನ್ಯ ಪ್ರಸಾದ್ ಅವರಿಂದ ಗಾನದೀವಿಗೆ. ಇದರ ಜತೆ ಆಲ್ಬಂ ಬಿಡುಗಡೆ, ಬಂದವರೆಲ್ಲರಿಗೂ ಊಟೋಪಹಾರ. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಲೂನ್ ಹಾರಿಸಿ ಚಾಲನೆ ನೀಡಿದರು.
ಶ್ರೀಕಾಂತ್ ಶೆಟ್ಟಿ ಮಾತನಾಡಿ, ಉಳ್ಳಾಲದ ರಾಣಿ ಅಬ್ಬಕ್ಕ ಮತ್ತು ಕಲ್ಯಾಣಸ್ವಾಮಿ ಹೋರಾಟದ ಹಾದಿಯನ್ನು ನೆನಪಿಸಿದರು. ಜತೆಗೆ ಸ್ವಾತಂತ್ರ್ಯ ಪಡೆಯಲು ತುಳುನಾಡಿನ ಜನರು ಬಲಿದಾನಗೈದ ವೀರಗಾಥೆಯನ್ನು ತಿಳಿಸಿದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.
ಗಣ್ಯರ ಉಪಸ್ಥಿತಿ: ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು, ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಮಾದವ ಮಾವೆ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮ್ ದಾಸ ಬಂಟ್ವಾಳ, ಡೊಂಬಯ್ಯ ಅರಳ , ರವೀಶ್ ಶೆಟ್ಟಿ ಕರ್ಕಳ,ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಜಯರಾಮ ನಾಯ್ಕ್ ಕುಂಟ್ರಕಳ,ಮೋನಪ್ಪ ದೇವಸ್ಯ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಭಾಕರ್ ಪ್ರಭು, ಪುಷ್ಪರಾಜ ಚೌಟ, ವಜ್ರನಾಥ ಕಲ್ಲಡ್ಕ, ಪ್ರದೀಪ್ ಅಜ್ಜಿಬೆಟ್ಟು, ರತ್ನಕುಮಾರ್ ಚೌಟ, ಪುರುಷೋತ್ತಮ ಸಾಲಿಯಾನ್ ನರಿಕೊಂಬು ಕಸ್ತೂರಿ ಪಂಜ ಸಹಿತ ಪ್ರಮುಖರು, ಅಧಿಕಾರಿಗಳಾದ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿ.ಸೋಜ, ಕೃಷಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ನಂದನ್ ಶೆಣೈ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್.ತಾರಾನಾಥ್ ಸಾಲಿಯಾನ್, ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್.ಪ್ರಶಾಂತ್ ಪೈ, ಎಇಇ ನಾರಾಯಣ ಭಟ್, ಪ್ರಾದೇಶಿಕ ಸಾರಿಗೆ ಇಲಾಖಾ ಅಧಿಕಾರಿ ಚರಣ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್, ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ಟಿಡಿ.ನಾಗರಾಜ್, ಎಸ್.ಐ.ಗಳಾದ ಅವಿನಾಶ್, ಹರೀಶ್ , ಮೂರ್ತಿ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಎ.ಆರ್. ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಜೈನ ಶೈಲಿಯ ಖಾದ್ಯಗಳು ಗಮನ ಸೆಳೆದವು. ಬೆಳಗಿನ ವೇಳೆ ಮಸಾಲೆದೋಸೆ, ಕೇಕ್ ಸಹಿತ ವಿವಿಧ ಖಾದ್ಯಗಳಿದ್ದರೆ, ಮಧ್ಯಾಹ್ನ ಜೈನ ಶೈಲಿಯ ಭೋಜನ ಇತ್ತು.