ಬಂಟ್ವಾಳ: ಗೂಡಿನಬಳಿಯಲ್ಲಿರುವ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಹಿತ ವಿವಿಧ ಸಂಘಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳಲ್ಲಿ ದೊರೆಯುವ ವಿವಿಧ ಸಹಪಠ್ಯ ಚಟುವಟಿಕೆಗಳ ಅವಕಾಶವನ್ನು ಗರಿಷ್ಠ ಪ್ರಮಾಣದಲ್ಲಿ ಉಪಯೋಗಿಸಬೇಕು ಎಂದು ಈ ಸಂದರ್ಭ ಉದ್ಘಾಟಿಸಿದ ದ. ಕ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆದ ತುಂಬೆ ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ಗಂಗಾಧರ ಆಳ್ವ ಕೆ.ಎನ್. ಹೇಳಿದರು.
ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ದಿ ಸಂಘದ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಭಿತ್ತಿ ಪತ್ರಿಕೆ ಚಿಗರು ಅನ್ನು ಅನಾವರಣಗೊಳಿಸಲಾಯಿತು.
ಕಾಲೇಜಿನ ಎನ್ ಎಸ್ ಎಸ್ ಘಟಕ, ಸಾಹಿತ್ಯ ಸಂಘ, ವಾಣಿಜ್ಯ ಸಂಘ, ವಿಜ್ಞಾನ ಸಂಘ, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್, ಇಕೊ ಕ್ಲಬ್ ಮತ್ತು ಮತದಾರರ ಸಾಕ್ಷರತಾ ಸಂಘಗಳ ಚಟುವಟಿಕೆಗಳ ಬಗ್ಗೆ ಯೋಜನಾಧಿಕಾರಿಗಳಾದ ಉಪನ್ಯಾಸಕ ಬಾಲಕೃಷ್ಣ ನಾಯ್ಕ್.ಕೆ, ದಾಮೋದರ ಇ.ಮತ್ತು ಅಬ್ದುಲ್ ರಝಾಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ಸಂಘದ ಸಂಚಾಲಕಿ, ಜೀವಶಾಸ್ತ್ರ ಉಪನ್ಯಾಸಕಿ ಲವಿನಾ ಶಾಂತಿ ಲೋಬೋ, ರೆಡ್ ರಿಬ್ಬನ್ ಕ್ಲಬ್ ನ ನಿರ್ದೇಶಕಿ , ಗಣಿತ ಉಪನ್ಯಾಸಕಿ ಲಕ್ಷೀ ಆಚಾರ್ಯ, ಅತಿಥಿ ಉಪನ್ಯಾಸಕರಾದ ದಿವ್ಯ ವಿ. ಹರ್ಷಿತಾ ಎಚ್. ಸ್ಫೂರ್ತಿ ಕೆ. ಸಹಕರಿಸಿದರು. ವಿದ್ಯಾರ್ಥಿನಿ ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಸ್ವಾಗತಿಸಿದರು. ಎನ್.ಎಸ್.ಎಸ್.ಘಟಕದ ನಾಯಕ ಹೇಮಂತ್ ವಂದಿಸಿದರು.