ಬಂಟ್ವಾಳ

14ರಂದು ರಮಾನಾಥ ರೈ ನೇತೃತ್ವದಲ್ಲಿ ಪಂಜಿಕಲ್ಲಿನಲ್ಲಿ ಆಟಿಡ್ ಕೆಸರ್ಡ್ ಒಂಜಿ ದಿನ

ಬಂಟ್ವಾಳ: ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಆಟಿದ ಕೆಸರ್ಡ್ ಒಂಜಿ ದಿನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷತೆ, ಪಿಯೂಸ್ ಎಲ್. ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಆಟಿದ ಕೂಟ ಸಮಿತಿ ಬಂಟ್ವಾಳ  ಸಾರಥ್ಯದಲ್ಲಿ ಆಗಸ್ಟ್ 14ರಂದು ದಿನವಿಡೀ ನಡೆಯಲಿದೆ.

ಈ ವಿಷಯವನ್ನು ಪಂಜಿಕಲ್ಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಮಾನಾಥ ರೈ ತಿಳಿಸಿ ತುಳುನಾಡ ಪರಂಪರೆಯ ಖಾದ್ಯ ವೈವಿಧ್ಯದೊಂದಿಗೆ ಪಾರಂಪರಿಕ ಆಟೋಟಗಳು ಇರಲಿವೆ. ಸುಮಾರು ಮೂರು ಸಾವಿರದಷ್ಟು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬಂಟ್ವಾಳ ಕ್ಷೇತ್ರಕ್ಕೊಳಪಟ್ಟ ಗ್ರಾಪಂಗಳ ನಾಗರಿಕರಿಗೆ ಇಲ್ಲಿ ಭಾಗವಹಿಸಲು ಅವಕಾಶವಿದ್ದು, ಸಂಗೀತಕುರ್ಚಿ, ಶೂಟಿಂಗ್ ದ ವಿಕೆಟ್, ಕೆಸರುಗದ್ದೆ ಓಟ, ಲಿಂಬೆ ಚಮಚ ಓಟ, ಪಾಡ್ದನ ಹೆಳುವ ಸ್ಪರ್ಧೆ, ಹಿಮ್ಮುಖ ಓಟ, ನೀರಿನ ಕೊಡ ಸೊಂಟದಲ್ಲಿಟ್ಟು ಓಟ, ಮಡಲು ಹೆಣೆಯುವುದು, ಮಡಿಕೆ ಹೊಡೆಯುವುದು, ಕಾರುಕಂಬ್ಳ ಓಟ, ಅಂತರ್ ಪಂಚಾಯತ್ ತಂಡಗಳ ನಡುವೆ ಹಗ್ಗ ಜಗ್ಗಾಟ, ಬಾಲ್ ಎಸೆತ, ಉರಾಳ್ ಹಾಕುವುದು, ಅಡಿಕೆ ಹಾಳೆಯಲ್ಲಿ ಎಳೆತ, ದಂಪತಿಗೆ ಕ್ರೇಝಿ ಗೇಮ್ಸ್, ತಪ್ಪಂಗಾಯಿ ಓಟ, ತೆಂಗಿನಕಾಯು ಉರುಳಿಸುವುದು ಆಟಗಳು ನಡೆಯಲಿವೆ ಎಂದರು.

ಬೆಳಗ್ಗೆ ನಾಚಿಗೆ ಮುಳ್ಳು ಕಷಾಯ, ಬೇಂಗದ ಕೆತ್ತೆ ಕಷಾಯ, ಪತ್ರೊಡೆ, ಪದೆಂಜಿ ಉಪ್ಪುಕರಿ, ಪೆಲಕಾಯಿ ಗಟ್ಟಿ, ಮಧ್ಯಾಹ್ನ ಕಣಿಲೆ ಉಪ್ಪಡ್, ಚೇವು ಸೋನೆ ಸೊಪ್ಪು ಚಟ್ನಿ, ಉಪ್ಪಡ್ ಪಚ್ಚಿಲ್ ಪಲ್ಯ, ಕುಡುತ ಸಾರ್, ಕರಿಚೇವು ಅಂಬಡೆ ಗಸಿ, ಪೂಂಬೆ ಚಟ್ನಿ, ತಜಂಕ್ ಪೆಲತರಿ ಸುಕ್ಕ, ಕಂಚಲ್ ಪೀರೆ ಪೋಡಿ, ಕಜೆ ಅರಿ ನುಪ್ಪು, ಪೆಲಕಾಯಿ ಪಾಯಸ, ಸಂಜೆ ಪೆಲಕಾಯಿ ಗಾರಿ, ಪತ್ರೊಡೆ ಉಪ್ಪುಕರಿ, ರಾಗಿ ಮಣ್ಣಿ, ಕಡುಬು ಮಂಜಲ್ ಇರೆತ ಗಟ್ಟಿ, ತಜಂಕ್ ಅಂಬಡೆ, ಈಂದ್ ಹುಡಿ ಕಷಾಯ ಇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಜೈನ್, ಕೋಶಾಧಿಕಾರಿ ದೇವಪ್ಪ ಕುಲಾಲ್, ಸಂಚಾಲಕರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ವಿವಿಧ ಪ್ರಮುಖರಾದ ಪದ್ಮಶೇಖರ ಜೈನ್, ಎಡ್ತೂರು ರಾಜೀವ ಶೆಟ್ಟಿ, ಪದ್ಮನಾಭ ರೈ, ಸುರೇಶ್ ಜೋರ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ ಜೈನ್, ಸೀತಾರಾಮ ಶೆಟ್ಟಿ ಕಾಂತಾಡಿ, ದಿನೇಶ್ ಶೆಟ್ಟಿ, ಕೇಶವ ಪೂಜಾರಿ, ಸದಾನಂದ ಶೆಟ್ಟಿ, ಚೇತನ್ ಬುಡೋಳಿ, ರಾಜೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ