ಬಂಟ್ವಾಳದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷದ ತಾಲೂಕು ಸಮ್ಮೇಳನ ನಡೆಯಿತು. ಈ ಸಂದರ್ಭ ಮುಖಂಡರಾದ ವಿ.ಕುಕ್ಯಾನ್ ಮಾತನಾಡಿ, ರಾಷ್ಟ್ರಧ್ವಜದ ತಯಾರಿಕೆಯಲ್ಲಿ ಲೋಪದೋಷಗಳಾಗಿದ್ದು, ಅವನ್ನು ಸರಿಪಡಿಸಬೇಕು, ಮನೆ ಮನೆಯಲ್ಲಿ ಧ್ವಜ ಹಾರಿಸಲು ಹೇಳಿರುವುದು ಸಂತೋಷ ಆದರೆ ಅದೇ ಸಂದರ್ಭ ದೇಶದ ಆರ್ಥಿಕತೆ ಮೇಲೆತ್ತಲು ಕ್ರಮ ಕೈಗೊಳ್ಳಬೇಕು ಎಂದರು.
ಅಧ್ಯಕ್ಷ ಮಂಡಳಿಯ ಪ್ರೇಮನಾಥ ಕೆ, ಕುಸುಮಾ ರಾಜೀವ ಪೂಜಾರಿ ಈ ಸಂದರ್ಭ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಮುಖ್ಯ ಅತಿಥಿಗಳಾಗಿ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಙ ತಾಲೂಕು ಮುಖಂಡ ಬಿ.ಬಾಬು ಭಂಡಾರಿ ಉಪಸ್ಥಿತರಿದ್ದರು. ಪುರ ಸಭಾ ಮಾಜಿ ಸದಸ್ಯ ಭೋಜ ಕರಂಬೇರ ಧ್ವಜಾರೋಹಣ ನೆರವೇರಿಸಿದರು. ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯಯದರ್ಶಿ ಬಿ.ಶೇಖರ್ ಮಂಡಿಸಿದರು.
ಪ್ರತಿನಿಧಿಗಳಾದ ವಿಶ್ವನಾಥ ಕಳ್ಳಿಗೆ, ಬಿ ಎಂ ಹಸೈನಾರ್ ವಿಟ್ಲ, ಬಿ.ಬಾಬು ಭಂಡಾರಿ, ಬಾರತಿ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡರು.
15 ಜನರ ನೂತನ ತಾಲೂಕು ಸಮಿತಿ ರಚಿಸಲಾಗಿ ನೂತನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್ ಬಂಟ್ವಾಳ್, ಸಹ ಕಾರ್ಯದರ್ಶಿ ಗಳಾಗಿ ಪ್ರೇಮನಾಥ ಕೆ, ಭಾರತಿ ಪ್ರಶಾಂತ್, ಕೋಶಾಧಿಕಾರಿಯಾಗಿ ಶ್ರೀನಿವಾಸ ಭಂಡಾರಿ ಹಾಗೂ ಇತರ 12 ಜನ ತಾಲೂಕು ಸಮಿತಿಗೆ ಆಯ್ಕೆಯಾದರು. ಸುಮಾರು 12 ಪ್ರಮುಖ ಬೇಡಿಕೆಗಳನ್ನು ಒಳಗೊಂಡು ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಲಾಯಿತು.
ಜಿಲ್ಲಾ ಸಮ್ಮೇಳನ: ಆಗಸ್ಟ್ 27 ರಿಂದ 29 ರವರೇಗೆ ಬಂಟ್ವಾಳದಲ್ಲಿ ಪಕ್ಷದ ಜಿಲ್ಲಾ ಸಮ್ಮೇಳನ ನಡೆಯಲಿದ್ದು 27ಮತ್ತು 28 ರಂದು ಬಂಟ್ವಾಳ ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಪ್ರತಿನಿಧಿ ಸಮ್ಮೇಳನ ಜರುಗಲಿರುವುದು.29 ರಂದು ಬಿಸಿರೋಡು ಕೈಕಂಬದಿಂದ ಆಕರ್ಷಕ ವರ್ಣರಂಜಿತ ಬೃಹತ್ ರ್ಯಾಲಿ ಹಾಗೂ ಬ್ರಹ್ಮಶ್ರೀನಾರಾಯಣಗುರು ಸಭಾಭವನದಲ್ಲಿ ಬಹಿರಂಗ ಸಭೆ ಜರುಗಲಿದ್ದು ಜಿಲ್ಲಾ ಸಮ್ಮೇಳನ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಮಿತಾ ವಂದಿಸಿದರು.