ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಭಾನುವಾರ ಮಧ್ಯಾಹ್ನ ಕನ್ನಡ ಸಾಹಿತ್ಯ ಪರಿಷತ್ತಿನ ತಿಂಗಳ ಬೆಳಕು ಕಾರ್ಯಕ್ರಮದಡಿ ಆಯೋಜಿಸಲಾದ ಬಹುಭಾಷಾ ಕವಿಗೋಷ್ಠಿಯಲ್ಲಿ ಸಮಕಾಲೀನ ವಿಚಾರಗಳು ಪ್ರಸ್ತುತಗೊಂಡವು.
ಅಧ್ಯಕ್ಷತೆ ವಹಿಸಿದ್ದ ಮೆಲ್ಕಾರ್ ಮಹಿಳಾ ಪದವಿ ಕಾಲೇಜು ಕನ್ನಡ ಉಪನ್ಯಾಸಕ ಎಂ.ಡಿ.ಮಂಚಿ ಇದನ್ನು ಉಲ್ಲೇಖಿಸಿ, ಸಮಾಜದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಸಾಮಾಜಿಕ ಪಿಡುಗುಗಳ ಕುರಿತು ಉಲ್ಲೇಖಿಸಿ, ಕವಿಗೋಷ್ಠಿಯಲ್ಲಿ ಪ್ರಸ್ತುತಗೊಂಡ ಕವನಗಳು ಅವುಗಳನ್ನು ಎತ್ತಿಹಿಡಿಯಲು ಸಫಲವಾಗಿವೆ ಎಂದರು.
ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ್ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ಕವಿ ಗಣೇಶ ಪ್ರಸಾದ ಪಾಂಡೇಲು ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ, ತುಳು, ಕೊಂಕಣಿ, ಹವ್ಯಕ ಮತ್ತು ಬ್ಯಾರಿ ಭಾಷೆಗಳ ಕವನಗಳನ್ನು ವಾಚಿಸಲಾಯಿತು.
ವಿಶ್ವನಾಥ ಕುಲಾಲ್ (ಕನ್ನಡ), ಶಶಿಕಲಾ ಭಾಸ್ಕರ ದೈಲ (ತುಳು), ಜಯಶ್ರೀ ಶೆಣೈ (ಕೊಂಕಣಿ), ಅಬ್ದುಲ್ ಮಜೀದ್ (ಬ್ಯಾರಿ), ಡಾ. ಮೈತ್ರಿ ಭಟ್ ವಿಟ್ಲ (ಹವ್ಯಕ), ದಾ.ನ. ಉಮಣ (ತುಳು), ವಿಷ್ಣುಗುಪ್ತ ಪುಣಚ (ಕನ್ನಡ), ಸುಹಾನ ಸಯ್ಯದ್ ಎಂ. (ಬ್ಯಾರಿ), ಮಾನಸ ವಿಜಯ್ ಕೈಂತಜೆ (ಹವ್ಯಕ), ಆನಂದ ರೈ ಅಡ್ಕಸ್ಥಳ (ತುಳು), ಮಹಮ್ಮದ್ ಮುಅದ್ ಜಿ.ಎಂ. (ಬ್ಯಾರಿ), ಶಾಂತಾ ವಿಘ್ನೇಶ್ವರ ಕೋಡ್ಲ (ಹವ್ಯಕ), ನಳಿನಿ ಬಿ.ರೈ ಮಂಚಿ (ಕನ್ನಡ), ಜಯಶ್ರೀ ಇಡ್ಕಿದು (ಕನ್ನಡ), ಚೇತನ್ ಮುಂಡಾಜೆ (ಕನ್ನಡ), ರಜನಿ ಚಿಕ್ಕಯ್ಯಮಠ (ಕನ್ನಡ) ಕವನಗಳನ್ನು ವಾಚಿಸಿದರು. ಕಸಾಪ ಕೋಶಾಧಿಕಾರಿ ಡಿ.ಬಿ.ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಸೊನಿತಾ ಕೆ. ನೇರಳಕಟ್ಟೆ ವಂದಿಸಿದರು.