Set in darkness – ian rankin
ಪುಸ್ತಕ ಓದು: ಪ್ರಶಾಂತ್ ಭಟ್
(Rebus 11) ರೀಬಸ್‌ಗೆ ಎರಡೆರಡು ಕೊಲೆಗಳ ಬಗೆ ಹರಿಸಬೇಕಾದ ಜೊತೆಗೆ ತನ್ನ ಡಿಪಾರ್ಟ್ಮೆಂಟ್ ಒಳಗೇ ನಡೆಯುವ ಕತ್ತಿ ಮಸೆತದ ವಿರುದ್ಧ ಕೂಡ ಹೊಡೆದಾಡಬೇಕಾದ ಅನಿವಾರ್ಯತೆ.
ಅದರಲ್ಲೂ ಒಂದು ಕೊಲೆ ನಡೆದು ಇಪ್ಪತ್ತು ವರ್ಷಗಳೇ ಆಗಿದೆ. ಅನಿರೀಕ್ಷಿತವಾಗಿ ಜೀರ್ಣವಾದ ಹೆಣವೊಂದು ಸಿಕ್ಕಿ ಅದರ ಮೂಲ ಹುಡುಕಲು ಹೊರಡಬೇಕಾಗುತ್ತದೆ. ಅದಕ್ಕೂ ಆಗ ತಾನೇ ಆದ ಕೊಲೆಗೂ ಸಂಬಂಧವಿದೆಯೇ? ಹಾಗಾದರೆ ಈ ಹೆಣ ಸಿಗುವುದಕ್ಕೂ ಆ ಕೊಲೆ ಆಗದದ್ದೂ ಕಾಕತಾಳೀಯ ಅಲ್ಲವೇ? ಇದರ ನಡುವೆ ಘಟಿಸಿದ ಒಂದು ಆತ್ಮಹತ್ಯೆಗೂ ಇದಕ್ಕೂ ಇರುವ ಸಂಬಂಧ ಏನು?
ರ‌್ಯಾನ್‌ಕಿನ್ ಇಷ್ಟವಾಗುವುದು ಅವನು ಎಡಿನ್‌ಬರ್ಗ್‌ನ ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ರೀತಿಗೆ ,ತನ್ನ ಪರ್ಸನಲ್ ಡೆಮನ್‌ಗಳ ರೀಬಸ್ ಹೋರಾಡುವ ಕಾರಣಕ್ಕೆ. ಟಾರ್ಟನ್ ನೊಯಿರ್ ಪ್ರಕಾರದಲ್ಲಿ ಹೀರೋ ಯಾವತ್ತೂ ಸೂಪರ್ ಹೀರೋ ಆಗುವುದಿಲ್ಲ. ಅಲ್ಲಿ ಅವ ಸಾಮಾನ್ಯ. ಲಾಜಿಕಲ್ ಯೋಚನೆ ಮಾತ್ರ ಅವನ ತಾಕತ್ತು.
ಎಲ್ಲಾ ಬಗೆ ಹರಿದ ಬಳಿಕವೂ ನಿಜವಾದ ನ್ಯಾಯ ಸಿಕ್ಕಿತೇ ಎನ್ನುವುದು ಪ್ರಶ್ನೆಯಾಗಿ ಉಳಿಯುತ್ತದೆ. ಹಾಗಾದರೆ ಇಷ್ಟೆಲ್ಲ ಕಷ್ಟಪಟ್ಟು ರೀಬಸ್ ಕೇಸ್ ಬಗೆಹರಿಸಿದ್ದು ಕೇವಲ ಅವನ ತೃಪ್ತಿಗಾಗಿಯೇ ಎಂಬುದು ಉಳಿದು ಹೋಗುತ್ತದೆ.