ಕೃಷಿ ಉತ್ಪಾದಕತೆ ಹೆಚ್ಚಿಸಲು, ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗೆ ಪ್ರೋತ್ಸಾಹಿಸಲು, ಇಂಧನ ವೆಚ್ಚದ ಭಾರವನ್ನು ಕಡಿಮೆಗೊಳಿಸಲು ಸರ್ಕಾರ 2022-23ನೇ ಸಾಲಿನಲ್ಲಿ ಜಾರಿ ಮಾಡಿದ ಯೋಜನೆ ರೈತಶಕ್ತಿ ಯೋಜನೆ. ಈ ಕುರಿತು ಬಂಟ್ವಾಳದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಂದನ್ ಶೆಣೈ ಈ ಕುರಿತು ಹೇಳಿಕೆಯೊಂದನ್ನು ನೀಡಿ ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ.
ಸಹಾಯಧನವೆಷ್ಟು:
ಪ್ರತಿ ಎಕರೆಗೆ ರೂ.250ಗಳಂತೆ ಗರಿಷ್ಟ 5 ಎಕರೆಗೆ ರೂ.1250ಗಳನ್ನು ಡಿ.ಬಿ.ಟಿ ಮೂಲಕ ಡೀಸೆಲ್ ಒದಗಿಸಲು ಸಹಾಯಧನ ನೀಡಲಾಗುತ್ತದೆ.
ಹೇಗೆ ಅಪ್ಲೈ ಮಾಡಬೇಕು:
ಆನ್ಲೈನ್ ನಲ್ಲಿ ಇದಕ್ಕೆ ಅಪ್ಲೈ ಮಾಡಬಹುದು. ಯೋಜನೆಯ ಸೌಲಭ್ಯ ಪಡೆಯಲು ರೈತರು ತಮ್ಮ ಒಡೆತನದಲ್ಲಿರುವ ಎಲ್ಲಾ ಲ್ಯಾಂಡ್ ಪಾರ್ಸೆಲ್ಸ್ ಗಳನ್ನು ಎಫ್.ಆರ್.ಯು.ಐ.ಟಿ.ಎಸ್. (ಫ್ರೂಟ್ಸ್) ಪೋರ್ಟಲ್ ನಲ್ಲಿ ನೋಂದಣಿ ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶವಿದೆ.
ಏನೇನು ಬೇಕು:
ರೈತರು ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್, ಪ್ರತಿ,ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ತಮ್ಮ ಒಡೆತನದಲ್ಲಿರುವ ಜಮೀನಿನ ಎಲ್ಲಾ ಆರ್.ಟಿ.ಸಿ. ಪ್ರತಿಗಳೊಂದಿಗೆ ಕೃಷಿ ತೋಟಗಾರಿಕೆ, ಕಂದಾಯ, ಪಶು ಸಂಗೋಪನೆ ಅಥವಾ ಕೆ.ಎಂ.ಎಫ್ ನಲ್ಲಿ ಎಫ್.ಆರ್.ಯು.ಐ.ಟಿ.ಎಸ್. ತಂತ್ರಾಂಶದಲ್ಲಿ ಎಫ್.ಐ.ಡಿ. ಹೊಂದಿದ್ದರೆ, ಸೇರ್ಪಡೆಗೆ ಬಾಕಿ ಇರುವ ಎಲ್ಲಾ ಲ್ಯಾಂಡ್ ಪಾರ್ಸೆಲ್ಸ್ ಅಂದರೆ ಜಮೀನಿನ ಹಿಸ್ಸಾ ನಂಬರ್ ಗಳನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸಬಹುದು.
ಅಂತಿಮ ದಿನಾಂಕ ಯಾವುದು:
ಆಗಷ್ಟ್ 20 ಸೇರ್ಪಡೆಗೆ ಅಂತಿಮ ದಿನ. ನಂತರ ಪೋರ್ಟಲ್ ನಲ್ಲಿ ಸೇರ್ಪಡೆಗೊಂಡ ಹೆಚ್ಚುವರಿ ವಿಸ್ತೀರ್ಣಕ್ಕೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಅಂತಿಮ ದಿನಾಂಕದ ನಂತರ ಸೃಜನೆಯಾಗುವ ಹೊಸ ಎಫ್.ಐ.ಡಿ.ಗಳಿಗೆ ಮಾತ್ರ ವಿಸ್ತೀರ್ಣಕ್ಕೆ ಅನುಗುಣವಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.
ಬಂಟ್ವಾಳದಲ್ಲಿ ಬಹುತೇಕ ಬಾಕಿ:
ಬಂಟ್ವಾಳ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಎಫ್.ಐ.ಡಿ. ನೋಂದಣಿ ಬಹುತೇಕ ಬಾಕಿ ಇದೆ. ಇಲ್ಲಿನ ಬಂಟ್ವಾಳ ಹೋಬಳಿಯಲ್ಲಿ ಒಟ್ಟು ಹಿಡುವಳಿ ಸಂಖ್ಯೆ 125255 ಆಗಿದ್ದರೆ, ನೋಂದಣಿಯಾದದ್ದು ಕೇವಲ 30466. ಬಾಕಿ 94789
ಪಾಣೆಮಂಗಳೂರು ಹೋಬಳಿಯಲ್ಲಿ ಒಟ್ಟು ಹಿಡುವಳಿ ಸಂಖ್ಯೆ 152920 ಆಗಿದ್ದರೆ, ನೋಂದಣಿಯಾದದ್ದು ಕೇವಲ 27170 ಬಾಕಿ 125750 ವಿಟ್ಲ ಹೋಬಳಿಯಲ್ಲಿ ಒಟ್ಟು ಹಿಡುವಳಿ ಸಂಖ್ಯೆ 148247 ಆಗಿದ್ದರೆ, ನೋಂದಣಿಯಾದದ್ದು ಕೇವಲ 38343. ಬಾಕಿ 109904