ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಗವರ್ನರ್ ರವೀಂದ್ರ ಭಟ್ ಪದಪ್ರದಾನ ಮಾಡಲಿದ್ದಾರೆ. ಜುಲೈ 16 ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಆತಿಥಿಯಾಗಿ ಮಂಜುನಾಥ ಆಚಾರ್ಯ, ರಮೇಶ್, ಕೆ.ಎನ್.ಗಂಗಾಧರ ಆಳ್ವ ಭಾಗವಹಿಸುವರು. ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ಶನ್ಫತ್ ಶರೀಫ್ ಅವರು ಚುನಾಯಿತ ಅಧ್ಯಕ್ಷ ಬೊಂಡಾಲ ಚಿತ್ತರಂಜನ ಶೆಟ್ಟಿ ಮತ್ತು ತಂಡಕ್ಕೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದರು. ಈ ಬಾರಿಯ ರೋಟರಿ ಧ್ಯೇಯವಾಕ್ಯದಂತೆ ಕ್ಲಬ್ ಕಾರ್ಯನಿರ್ವಹಿಸಲಿದ್ದು, ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡಲಿದ್ದೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿರ್ಗಮಿತ ಅಧ್ಯಕ್ಷ ಶನ್ಫತ್ ಶರೀಫ್, ನೂತನ ಕಾರ್ಯದರ್ಶಿ ಉಮೇಶ್ ಆರ್ .ಮೂಲ್ಯ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಿಶೋರ್ ಕುಮಾರ್, 2023-24ರ ಅಧ್ಯಕ್ಷ ಸುರೇಶ್ ಸಾಲಿಯಾನ್, ಸಾರ್ಜೆಂಟ್ ಆರ್ಮ್ಸ್ ಮನೋಜ್ ಕನಪಾಡಿ, ಪ್ರಮುಖರಾದ ರೋಷನ್ ರೈ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…