ಬಂಟ್ವಾಳ

ಪಂಜಿಕಲ್ಲು ಮುಕ್ಕುಡದಲ್ಲಿ ದುರಂತ ಘಟನೆಗೆ ಆಡಳಿತ ವೈಫಲ್ಯ ಕಾರಣ: ಮಾಜಿ ಸಚಿವ ರಮಾನಾಥ ರೈ ಆರೋಪ

ಬಂಟ್ವಾಳ: ಪಂಜಿಕಲ್ಲು ಮುಕ್ಕುಡದಲ್ಲಿ ನಡೆದ ದುರಂತ ಘಟನೆಯಲ್ಲಿ ಕಾರ್ಮಿಕರ ಜೀವ ಉಳಿಸುವ ಸಂದರ್ಭ ಸಕಾಲಕ್ಕೆ ವೈದ್ಯಕೀಯ ನೆರವು ದೊರಕೇ ಇದ್ದುದಕ್ಕೆ ಆಡಳಿತ ವೈಫಲ್ಯ ಕಾರಣ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಪಾದಿಸಿದ್ದಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಕಾಲಕ್ಕೆ ದೊರಕಬೇಕಿತ್ತು, ಆದರೆ ಅದನ್ನು ಮಾಡುವಲ್ಲಿ ಆಡಳಿತ ವಿಫಲವಾಯಿತು ಎಂದು ಆರೋಪಿಸಿದರು.

ಇಂಥ ಸನ್ನಿವೇಶಗಳು ಆದಾಗ ಜೀವ ಉಳಿಸಲು ಏನೇನು ಮಾಡಬಹುದು ಅಂಥ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಜೀವ ಉಳಿಸಲು ಬೇಕಾದ ಸಕಾಲಕ್ಕೆ ಆಕ್ಸಿಜನ್ ಇರುವ ಆಂಬುಲೆನ್ಸ್, ವೈದ್ಯರ ತಂಡ ಅಲ್ಲಿರಬೇಕಿತ್ತು ಎಂದು ರೈ ಹೇಳಿದರು.

ಘಟನೆಗಳು ಆದಾಗ ನೋಟಿಸ್ ಕೊಡುತ್ತಿದ್ದಾರೆ, ಬದಲಿ ವ್ಯವಸ್ಥೆ ಆಗಬೇಕಲ್ಲ ಎಂದು ಹೇಳಿದ ರೈ, ಮನೆಯಿಂದ ತೆರವುಗೊಳಿಸಿದರೆ ಅವರು ಎಲ್ಲಿಗೆ ಹೋಗಬೇಕು, ಬದಲಿ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿಯೂ ಪಂಚಾಯಿತಿಗಳಿಗಿದೆ ಎಂದರು.

ಪಂಜಿಕಲ್ಲಿನಲ್ಲಿ ಉಸಿರುಗಟ್ಟಿದ ಒಬ್ಬ ಪೇಶಂಟ್, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು ಎಂದ ರೈ, ಬಂಟ್ವಾಳದ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇದೆ ಎಂದಾದರೆ ಯಾಕೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.

ಯಾರ ರಕ್ಷಣೆ ಮಾಡಿದರು?

ಮನೆ ಮಾಲೀಕರು ಅಲ್ಲಿಗೆ ಹೋಗಬಾರದು, ಎಲ್ಲರೂ ಅಲ್ಲಿಗೆ ಹೋಗುತ್ತಾರೆ, ಯಾರನ್ನೂ ಬಿಟ್ಟಿಲ್ಲ ಎಂದಾದ ಮೇಲೆ ರಕ್ಷಣೆ ಮಾಡಿದ್ದು ಯಾರನ್ನು ಎಂದು ಪ್ರಶ್ನಿಸಿದ ರೈ,  ನಾವು ಜೀವರಕ್ಷಣೆ ಮಾಡಿದ್ದೇವೆ ಎಂದು ಪಂಚಾಯಿತಿಯ ತಂಡ ಹೇಳುತ್ತಾರೆ, ಅಲ್ಲಿ ಆತಂಕದಲ್ಲಿದ್ದವರನ್ನು ರಕ್ಷಿಸಿದ್ದೇವೆ ಎಂದು ಹೇಳಿದ್ದಾರೆ, ಹೋದವರು ಯಾರು, ರಕ್ಷಣೆ ಮಾಡಿದ್ದು ಯಾರನ್ನು ಎಂದು ರೈ ಪ್ರಶ್ನಿಸಿದರು.

ಪರಿಹಾರಕ್ಕೆ ಕಂಜೂಸುತನ ಬೇಡ:

ಗುಡ್ಡ ಕುಸಿತ, ಮಳೆಹಾನಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ಪರಿಹಾರ ನೀಡಬೇಕು. ಕಳೆದ ವರ್ಷ ಮಳೆಹಾನಿಯಲ್ಲಿ ಸರಿಯಾದ ಪರಿಹಾರ ಸಿಕ್ಕಿಲ್ಲ. ಮನೆಯನ್ನು ಬಹಳ ಆಸೆಪಟ್ಟು ನಿರ್ಮಿಸಿದ ಕಾರಣ ಹಾನಿಯಾಗುವ ಸಂದರ್ಭ ಕಂಗಾಲಾಗಿದ್ದಾರೆ. ಹೊಯ್ಗೆ, ಕಲ್ಲು, ಸಿಮೆಂಟ್ ಸಹಿತ ಗೃಹೋಪಯೋಗಿ, ಗೃಹನಿರ್ಮಾಣ ವಸ್ತುಗಳ ಬೆಲೆ ಹೆಚ್ಚಾಗಿದೆ. ಅದಕ್ಕೆ ಸರ್ಕಾರ ಸ್ಪಂದಿಸಬೇಕು. ಸರ್ಕಾರ ಹಣ ಬಿಡುಗಡೆ ಮಾಡುವಾಗ ಕಂಜೂಸುತನ ತೋರಿಸಬಾರದು ಎಂದು ರೈ ಒತ್ತಾಯಿಸಿದರು. ಪಾಣೆಮಂಗಳೂರಿನ ಉಪ್ಪುಗುಡ್ಡೆಯಲ್ಲಿ ವಾಟರ್ ಟ್ಯಾಂಕ್ ಕುಸಿತದ ಭೀತಿಯಲ್ಲಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಅಬ್ಬಾಸ್ ಆಲಿ, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಜಯಂತಿ ಪೂಜಾರಿ, ಪದ್ಮಶೇಖರ ಜೈನ್ ಮತ್ತಿತರರು ಇದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts