ಬಂಟ್ವಾಳ: ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದವರಿಗೆ ಗರಿಷ್ಠ ಪ್ರಮಾಣದ ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಪಾಕೃತಿಕ ವಿಕೋಪದಲ್ಲಿ ಅತೀ ಹೆಚ್ಚು ಹಾನಿಯಾದ ಬಂಟ್ವಾಳ ತಾಲೂಕಿನ ಕಾವಳಪಡೂರು,ಅರಳ, ಸಂಗಬೆಟ್ಟು , ಕಾಡಬೆಟ್ಟು ಗ್ರಾಮಗಳಿಗೆ ತೆರಳಿದ ಅವರು ಬಳಿಕ ಪರಿಶೀಲನೆ ನಡೆಸಿದರು.
ಅರಳ ಗ್ರಾಮದ ಪೊರ್ಕಳ ಬಂಡಶಾಲೆ ರಸ್ತೆ, ನವಗ್ರಾಮದ ಮನೋಹರ ಕುಲಾಲ್ ಅವರ ಗುಡ್ಡ ಕುಸಿತ, ತಿಮ್ಮಪ್ಪ ನಾಯ್ಕ್ ಹಾಗೂ ರಾಮ ಶೆಟ್ಟಿಗಾರ್ ಮನೆಗೆ ಹಾನಿ, ರೊಡಾಲ್ಪೋ ಅವರ ಮನೆಗೆ ಹಾನಿ, ರಿಯಾಜ್ ಮನೆಗೆ ಹಾನಿ, ರೊನಾಲ್ಡ್ ಮನೆಗೆ ಹಾನಿ, ಅಪ್ಪು ನಾಯ್ಕ್ ಕಂಪೌಂಡ್, ಸಂಗಬೆಟ್ಟು ಗ್ರಾಮದ ಗಾಡಿಪಲ್ಕೆ ನೋಣಯ್ಯ ಮೂಲ್ಯ ಅವರ ಮನೆಗೆ ಹಾನಿ, ಕಾಡಬೆಟ್ಟು ಗ್ರಾಮದ ಬೊಗ್ರುಕುಮೇರು ಗಣೇಶ್ ಎಂಬವರ ಮನೆಗೆ ಹಾನಿ, ಬೋಗ್ರುಕುಮೇರು ಗೋಪಾಲ ಎಂಬವರ ಮನೆಗೆ ಹಾನಿ, ಕಾವಳಪಡೂರು ಗ್ರಾಮದ ಕುಳಿಂಜಿಲಕೋಡಿ ರಘು ಮೊಗರ ಅವರ ಮನೆಗೆ ಹಾನಿ, ಕುಲಿಂಜಿಲಕೋಡಿ ರಾಜೇಶ್ವರಿ ಎಂಬವರ ಮನೆಗೆ ಹಾನಿಯಾನಿ, ಪದ್ಮಾವತಿ ವಸಂತ ಅವರ ಮನೆಗೆ ಹಾನಿಯಾಗಿದ್ದು ಇವರ ಮನೆಗೆ ಶಾಸಕರು ಅಧಿಕಾರಿಗಳ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆ ಕನಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ನೀಡುತ್ತಿದ್ದು, ಅದು ಸಾಕಾಗುವುದಿಲ್ಲ ಎಂಬ ಕಾರಣದಿಂದ ಸಿ.ಎಂ.ಬೊಮ್ಮಾಯಿ ನೇತೃತ್ವದ ಸರಕಾರ ಅಧಿಕಾರಿಗಳ ಮೂಲಕ ನಷ್ಟದ ಸಂಪೂರ್ಣ ಮಾಹಿತಿ ಪಡೆದ ಬಳಿಕ ಗರಿಷ್ಠ ಪ್ರಮಾಣದ ಪರಿಹಾರವನ್ನು ನೀಡಲು ಮುಂದಾಗಿದೆ. ಪ್ರತಿ ಗ್ರಾಮದಲ್ಲಿ ಹಾನಿಯಾದ ವಿವರಗಳನ್ನು ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದೇನೆ. ಜೊತೆಗೆ ಹಾನಿಯಾದ ಸಂದರ್ಭದಲ್ಲಿ ಸ್ಥಳದಲ್ಲಿಯೇ 10 ಸಾವಿರ ಹಣವನ್ನು ನೀಡುವಂತೆ ಸರಕಾರ ಅದೇಶ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲು ತಾಲೂಕಿನ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಅಜಿತ್ ಕುಮಾರ್, ಶರ್ಮಿತ್ ಜೈನ್, ಪ್ರಮೋದ್ ಕುಮಾರ್ ರೈ, ದಿನೇಶ್ ಕಾಡಬೆಟ್ಟು, ಜಿನೇಂದ್ರ ಜೈನ್, ಸುಲೋಚನ ಜಿ.ಕೆ.ಭಟ್, ಸುದರ್ಶನ್ ಬಜ , ಲಕ್ಮೀಧರ ಶೆಟ್ಟಿ, ಜಗದೀಶ್ ಅಳ್ವ, ಉಮೇಶ್ ಅರಳ, ಪ್ರಸನ್ನ ಶೆಟ್ಟಿ, ಸತೀಶ್ ಪೂಜಾರಿ, ವಿಮಲ ಮೋಹನ್, ರತ್ನಕುಮಾರ್ ಚೌಟ, ವಸಂತ ಅಣ್ಣಳಿಕೆ, ಪಿ.ಡಿ.ಒ.ಪಂಕಜಾ ಶೆಟ್ಟಿ, ಗ್ರಾಮ ಕರಣೀಕೆ ಆಶಾ ಮೆಹಂದಲೆ, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಕರಣೀಕ ಅಮೃತ್ ವಂಶು, ಪಿ.ಡಿ.ಒ.ಧರ್ಮರಾಜ್, ಗ್ರಾಮ ಕರಣೀಕ ಪರೀಕ್ಷಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.