ಬಂಟ್ವಾಳ: ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಕೇರಳದ ಮೂವರು ಕಾರ್ಮಿಕರಿಗೆ ತಲಾ 5 ಲಕ್ಷ ರೂ ನಂತೆ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂಟ್ವಾಳದ ಪ್ರವಾಸಿ ಬಂಗ್ಲೆಯಲ್ಲಿ ಮಂಗಳವಾರ ಸಂಜೆ ವಿತರಿಸಿದರು.
ಜಡಿಮಳೆಗೆ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಅದರಲ್ಲಿ ವಾಸವಿದ್ದ ಕೇರಳ ಮೂಲದ ನಾಲ್ವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮಣ್ಣಿನಡಿಗೆ ಸಿಲುಕಿದ ಘಟನೆ ಜುಲೈ 6ರಂದು ಬುಧವಾರ ರಾತ್ರಿ ನಡೆದಿದ್ದು, ಸತತ ಕಾರ್ಯಾಚರಣೆ ಬಳಿಕ ಎಲ್ಲರನ್ನೂ ಮಣ್ಣಿನಡಿಯಿಂದ ಹೊರತೆಗೆದರೂ ಮೂವರು ಮೃತಪಟ್ಟಿದ್ದರು. ಬಿಜು ಪಾಲಕ್ಕಡ್ , ಸಂತೋಷ್ ಅಲಪುರ, ಬಾಬು ಕೊಟ್ಟಾಯಂ ಅವರ ಕುಟುಂಬ ಸದಸ್ಯರು ಪರಿಹಾರ ಚೆಕ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಆರ್ ಆಶೋಕ್, ಎಸ್.ಆಂಗಾರ, ಸುನಿಲ್ ಕುಮಾರ್, ಸಿಸಿ.ಪಾಟೀಲ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ , ಸಂಜೀವ ಮಠಂದೂರು, ವಿಧಾನಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್, ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಡಾ. ಕುಮಾರ್, ಸಹಾಯಕ ಕಮೀಷನರ್ ಮದನ್ ಮೋಹನ್, ಪ್ರಮುಖರಾದ ಪ್ರಮೋದ್ ಮಧ್ವರಾಜ್, ಹರಿಕೃಷ್ಣ ಬಂಟ್ವಾಳ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ್ ಬೋಳಿಯಾರು, ಸುಲೋಚನ ಜಿ.ಕೆ.ಭಟ್, ದೇವದಾಸ್ ಶೆಟ್ಟಿ , ರವೀಶ್ ಶೆಟ್ಟಿ ಕರ್ಕಳ,ಡೊಂಬಯ್ಯ ಅರಳ, ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮನಾಥ ರಾಯಿ, ಪ್ರಕಾಶ್ ಅಂಚನ್, ರಂಜನ್ ಕುಮಾರ್ ಶೆಟ್ಟಿ ಅರಳ, ಪುಷ್ಪರಾಜ ಚೌಟ, ಸುದರ್ಶನ ಬಜ,ಎ.ಗೋವಿಂದ ಪ್ರಭು, ಉದಯಕುಮಾರ್ ರಾವ್, ದಿನೇಶ್ ಶೆಟ್ಟಿ ದಂಬೆದಾರ್, ಅಜಿತ್ ಶೆಟ್ಟಿ, ಅನಂದ ಶಂಭೂರು, ಸುರೇಶ್ ಬಂಟ್ವಾಳ, ಉಮೇಶ್ ಅರಳ, ಕಾರ್ತಿಕ್ ಬಳ್ಳಾಲ್, ವಿಕಾಸ್ ಪುತ್ತೂರು, ಸಂಜೀವ ಪೂಜಾರಿ, ಸದಾನಂದ ನಾವೂರ, ಹರೀಶ್ ರಾಯಿ, ಲೋಹಿತ್ ಕೊಳ್ನಾಡು, ಶಿವಪ್ರಸಾದ್ ಶೆಟ್ಟಿ ಅನೆಯಾಲಕೋಡಿ, ಜಿನೇಂದ್ರ ಜೈನ್, ತಹಶೀಲ್ದಾರ್ ಡಾ. ಸ್ಮಿತಾ ರಾಮು, ತಾಪಂ ಇಒ.ರಾಜಣ್ಣ , ಮುಖ್ಯಾಧಿಕಾರಿ ಎ.ಅರ್.ಸ್ವಾಮಿ, ಮೆಸ್ಕಾಂ ಇಇ.ಪ್ರಶಾಂತ್ ಪೈ, ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಶ ಭಟ್, ಕೃಷಿ .ಎ.ಡಿ. ನಂದನ್ ಶೆಣೈ, ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಲೋಕೋಪಯೋಗಿ ಎ.ಇ.ಇ.ಷಣ್ಮುಗಂ, ಪಂ.ರಾಜ್ ಎಇಇ ತಾರಾನಾಥ್ ಸಾಲಿಯಾನ್, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಡಿ.ವೈ.ಎಸ್. ಪಿ.ಪ್ರತಾಪ್ ಥೋರಾಟ್, ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ಟಿ.ಡಿ. ನಾಗರಾಜ್ , ಶಿವಕುಮಾರ್, ಎಸ್.ಐ.ಗಳಾದ ನಂದಕುಮಾರ್, ಅವಿನಾಶ್, ಹರೀಶ್, ಮೂರ್ತಿ, ಸಂಜೀವ, ಕಲೈಮಾರ್, ಭಾರತಿ, ಪಂಜಿಕಲ್ಲು ಪಿ.ಡಿ.ಒ.ಶ್ರೀವಿದ್ಯಾ, ವಿಎ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು