ವಿಟ್ಲ

ಮಳೆ ಪ್ರವಾಹಕ್ಕೆ ಕೊಚ್ಚಿ ಹೋದ ಕಲ್ಲಾಜೆ-ಮಡ್ಯಾರಬೆಟ್ಟು ಸೇತುವೆ

ಪುಣಚ ಗ್ರಾಮ ವ್ಯಾಪ್ತಿಗೊಳಪಡುವ ದೇವಿನಗರ-ಕಲ್ಲಾಜೆ-ಮಡ್ಯಾರಬೆಟ್ಟು-ಆಜೇರು ಮೂಲಕ ಸಾರ್ಯಕ್ಕೆ ಸಾಗುವ ರಸ್ತೆಯ ಮಡ್ಯಾರಬೆಟ್ಟು ಕಿರು ಸೇತುವೆಯೊಂದು ಮಳೆ ನೀರಿನ ಪ್ರವಾಹದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಈ ಸೇತುವೆಯನ್ನು ಬಳಸುವ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಪ್ರದೇಶದ ಈ ಸೇತುವೆಯನ್ನು 2013-2014 ರಲ್ಲಿ ಸಂಸದರ 5 ಲಕ್ಷ ಹಾಗೂ ಜಿ.ಪಂ.ನ 3  ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿತ್ತು. ಹತ್ತು ವರ್ಷ ತುಂಬುವುದರೊಳಗೆ ಮಳೆನೀರಿಗೆ ಆಹುತಿಯಾಗಿದೆ. ಇದರಿಂದಾಗಿ ಆಜೇರು ಭಾಗದಿಂದ ಪುಣಚಕ್ಕೆ ಬರುವ, ಕಲ್ಲಾಜೆಯಿಂದ ಸಾಜ ಮೂಲಕ ಪುತ್ತೂರು ಹಾಗೂ ಇತರೆಡೆ ಗಳಿಗೆ ಸಾಗುವ ಜನರ ಸಂಚಾರಕ್ಕೆ ಸಂಚಕಾರ ಬಂದೊದಗಿದೆ. ಈ ಪ್ರದೇಶದಲ್ಲಿಯ ನಿತ್ಯ ಸಂಚಾರಿಗಳಿಗೆ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಟ ಪಡುವಂತಾಗಿದೆ. ಪುಣಚ ಗ್ರಾಮದ ಕಲ್ಲಾಜೆ, ಮಲೆತ್ತಡ್ಕ,ಪೊಯ್ಯಮೂಲೆ ಇನ್ನಿತರ ಪ್ರದೇಶಗಳಲ್ಲಿಯೂ ಮಳೆಹಾನಿ ಸಂಭವಿಸಿದ್ದು ಮನೆ, ಕೃಷಿಭೂಮಿ ಗಳಿಗೆ ಹಾನಿಯಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು,ವಾರ್ಡ್ ಸದಸ್ಯರುಗಳು ಪಿಡಿಒ,ಗ್ರಾಮ ಕರಣಿಕರೊಂದಿಗೆ ಮಳೆಹಾನಿ ಪ್ರದೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತುರ್ತು ಕ್ರಮ ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ