ಬಿ.ಸಿ.ರೋಡಿನ ಪ್ರಮುಖ ರಸ್ತೆಯಲ್ಲಿ ಮಳೆಯಿಂದ ವಾಹನಸಂಚಾರಕ್ಕೆ ಅಡಚಣೆ ಉಂಟಾಯಿತು. ಚಿತ್ರ: ಕಿಶೋರ್ ಪೆರಾಜೆ
ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲು ಆಗಿದ್ದು, ಇದೇ ಪರಿಸ್ಥಿತಿ ಮುಂದುವರಿಯುವ ಸೂಚನೆ ಇರುವ ಕಾರಣ ಜುಲೈ 7ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ದಕ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಡಿಪ್ಲೊಮ, ಇಂಜಿನಿಯರಿಂಗ್, ಐಟಿಐ ಸೇರಿ ಸರ್ಕಾರಿ, ಅನುದಾನಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ 1077 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು, (NEWS UPDATE BY www.bantwalnews.com Editor: Harish Mambady)
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)