ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ನಿಂತಿಲ್ಲ. ಆಗಾಗ ಬಿಸಿಲು ಇಣುಕಿದಂತೆ ಕಾಣುತ್ತಿದ್ದರೂ ಕೂಡಲೇ ದಟ್ಟ ಮೋಡ ಆವರಿಸಿ ಮಳೆ ಸುರಿಯುತ್ತಿದೆ. ಈ ಮಧ್ಯೆ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವ ಕಾರಣ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಬುಧವಾರ ಬೆಳಗಿನ ಜಾವ 7.4 ಮೀಟರ್ ನ ಎತ್ತರದಲ್ಲಿ ಹರಿಯುತ್ತಿದ್ದರೆ, ಬೆಳಗ್ಗೆ 9.30ರ ವೇಳೆ ಅದು 7.5 ಮೀಟರ್ ತಲುಪಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಇದೇ ರೀತಿ ಒಂದೆರಡು ದಿನಗಳ ಕಾಲ ವಾತಾವರಣವಿದ್ದರೆ, ನೇತ್ರಾವತಿ ಉಕ್ಕಿ ಹರಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. NEWS UPDATES BY www.bantwalnews.com Editor: Harish Mambady