ಬಂಟ್ವಾಳ: ಬಂಟ್ವಾಳ ಸರ್ಕಾರಿ ತಾಲೂಕು ಆಸ್ಪತ್ರೆಗೆ1.67 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 22 ಹಾಸಿಗೆಗಳು ಇರುವ ಐಸಿಯು ಘಟಕವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಲೋಕಾರ್ಪಣೆ ಮಾಡಿದರು.
ಗ್ರಾಮೀಣ ಭಾಗದ ಬಡವರಿಗೆ ಅನುಕೂಲವಾಗುವಂತೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಲಾಗಿದೆ. ಇಚ್ಛಾಶಕ್ತಿ ಇದ್ದಾಗ ಸರಕಾರಿ ಆಸ್ಪತ್ರೆಯನ್ನು ಯಾವ ರೀತಿಯಲ್ಲಿ ಗುಣಮಟ್ಟದ ಆಸ್ಪತ್ರೆಯಾಗಿ ಬದಲಾವಣೆ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರನ್ನು ಸಂಸದರು ಶ್ಲಾಘಿಸಿದರು.
ತಾಲೂಕು ಮಟ್ಟದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದವರು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಮಾತನಾಡಿ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರವನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಮಾಡಿದ್ದೇವೆ. ಆರೋಗ್ಯ ಇಲಾಖೆಯ ಸಮಿತಿ ಹಾಗೂ ವೈದ್ಯರ ಸಹಕಾರದಿಂದ ಆಸ್ಪತ್ರೆಯ ಅಭಿವೃದ್ಧಿಗೆ ಕಾರಣವಾಯಿತು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಪ್ರಮುಖರಾದ ನಂದರಾಮ ರೈ, ವಿಶ್ವನಾಥ ಚೆಂಡ್ತಿಮಾರ್, ಗಣೇಶ್ ರೈ ಮಾಣಿ, ಮಾಧವ ಮಾವೆ,ಸುರೇಶ್ ಕೋಟ್ಯಾನ್, ಸಂದೀಪ್ ಎಸ್.ಆರ್, ವಜ್ರನಾಥ ಕಲ್ಲಡ್ಕ, ವಿಶ್ವನಾಥ ಚಂಡ್ತಿಮಾರ್, ಡಿ.ಎಚ್.ಒ ಡಾ.ಕಿಶೋರ್, ತಹಶೀಲ್ದಾರ್ ಡಾ. ಸ್ಮಿತಾ ರಾಮು, ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ,ಟಿ.ಎಚ್.ಒ.ಡಾ.ಸುದರ್ಶನ ಉಪಸ್ಥಿತರಿದ್ದರು