ಬಂಟ್ವಾಳ: ಬಂಟ್ವಾಳದ ಕನ್ನಡ ಭವನದಲ್ಲಿ ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ವತಿಯಿಂದ ಕಸಾಪ ಸಹಯೋಗದೊಂದಿಗೆ ವಿಶ್ವಭಾರತಿ ಸಪ್ತ ಸಾಪ್ತಾಹಿಕ ಕೂಟ ಸರಣಿ ತಾಳಮದ್ದಳೆಗೆ ಶನಿವಾರ ಚಾಲನೆ ನೀಡಲಾಯಿತು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಕೃಷ್ಣಕುಮಾರ ಸೋಮಯಾಜಿ ದೀಪ ಪ್ರಜ್ವಲನಗೊಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು.
ಈ ಸಂದರ್ಭ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಸಂಚಾಲಕ ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದರು. ಬಳಿಕ ನಡೆದ ತಾಳಮದ್ದಳೆ ಕರ್ಮಬಂಧನ ದಲ್ಲಿ ಭಾಗವತರಾಗಿ ವಿದ್ಯಾ ಐತಾಳ್, ಹಿಮ್ಮೇಳದಲ್ಲಿ ರಾಮಹೊಳ್ಳ ಸುರತ್ಕಲ್, ಬಾಲಪ್ರತಿಭೆ ಅದ್ವೈತ್ ಕನ್ಯಾನ, ಮುಮ್ಮೇಳದಲ್ಲಿ ಗುಂಡ್ಯಂಡ್ಕ ಈಶ್ವರ ಭಟ್, ಪ್ರಶಾಂತ್ ಹೊಳ್ಳ ಮತ್ತು ಕುಶಲ ಮುಡಿಪು ಸಹಕರಿಸಿದರು.