ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದಲ್ಲಿ ಜೂನ್ 18ರಂದು ಬೆಳಗ್ಗೆ 10ರಿಂದ ಬಂಟ್ವಾಳ ತಹಸೀಲ್ದಾರ್ ನೇತೃತ್ವದ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಕೆಲಿಂಜ ಶ್ರೀನಿಕೇತನ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳ ಸವಲತ್ತುಗಳ ವಿತರಣೆ, ಸಮಸ್ಯೆಗಳ ಕುರಿತು ಇಲಾಖಾ ಮುಖ್ಯಸ್ಥರೊಂದಿಗೆ ಸಮಾಲೋಚನೆಗೆ ಅವಕಾಶ ಇರುತ್ತದೆ. ಗ್ರಾಮಸ್ಥರ ಅಹವಾಲುಗಳಿದ್ದರೆ ಜೂ. 16ರೊಳಗೆ ಗ್ರಾ.ಪಂ. ದೂರು ಪೆಟ್ಟಿಗೆ, ಗ್ರಾಮಲೆಕ್ಕಿಗರು ಅಥವಾ ತಾಲೂಕು ಕಚೇರಿಗೆ ಸಲ್ಲಿಸುವಂತೆ ತಹಸೀಲ್ದಾರ್ ಡಾ. ಸ್ಮಿತಾ ರಾಮು ತಿಳಿಸಿದ್ದಾರೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)