ಬಂಟ್ವಾಳ: ಬಂಟ್ವಾಳ ಮೂಡುಬಿದಿರೆ ರಸ್ತೆಯ ಸೊರ್ನಾಡು ಎಂಬಲ್ಲಿ ಮಂಗಳವಾರ ಸಂಜೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಬಿ.ಸಿ.ರೋಡ್ ಕಡೆಗೆ ಸಿದ್ಧಕಟ್ಟೆಯಿಂದ ಬರುತ್ತಿದ್ದ ಸ್ನೇಹಿತರಾದ ಲೊರೆಟ್ಟೊ ಕುಪ್ರಾಡಿ ನಿವಾಸಿ ನಿತೇಶ್ (30) ಮತ್ತು ಭಂಡಾರಿಬೆಟ್ಟು ಸಮೀಪ ಮಯ್ಯರಬೈಲು ನಿವಾಸಿ ಶಶಿಧರ್ (26) ಡಿಕ್ಕಿಯ ರಭಸಕ್ಕೆ ರಸ್ತೆಗೆಸೆದು ಅಸು ನೀಗಿದರು.ಘಟನೆ ನಡೆದ ಹೊತ್ತಿನಲ್ಲಿ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಮುಂದಕ್ಕೆ ಕೊಂಡೊಯ್ದಿದ್ದು, ಆತನನ್ನು ಬೆನ್ನಟ್ಟಿದ ಸ್ಥಳೀಯರು ಅಡ್ಡಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…