ಬಿ.ಸಿ.ರೋಡಿನ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಮಂಗಳೂರು ಶಾಖೆ ಮತ್ತು ಸವಿತಾ’ಸ್ ಬ್ಯುಟಿ ಕಾರ್ನರ್ ಎಂಬ ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಮಂಗಳೂರಿನ ರಾವ್ ಆಂಡ್ ರಾವ್ ಸರ್ಕಲ್ ನ ಬಳಿ ಇರುವ ಸಹಕಾರಿ ಸದನದಲ್ಲಿ ಶುಭಾರಂಭಗೊಂಡಿದೆ.
ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಸಾಲ ಸೌಲಭ್ಯ ಪಡೆಯಲು ಸಹಕಾರಿ ಸಂಘಗಳು ಜನಸಾಮಾನ್ಯರಿಗೆ ಪೂರಕವಾಗಿ ಸಹಾಯವಾಗುತ್ತದೆ ಎಂದರು.
ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ಹಾಗೂ ಕ್ಯಾಂಪ್ಕೊ ನಿರ್ದೇಶಕ ಎಸ್.ಆರ್. ಸತೀಶ್ಚಂದ್ರ ಸವಿತಾ’ಸ್ ಬ್ಯುಟಿ ಕಾರ್ನರ್ ಸೌಂದರ್ಯವರ್ಧಕ ಉತ್ಪನ್ನಗಳ ಮಳಿಗೆ ಉದ್ಘಾಟಿಸಿ ಮಾತನಾಡಿ ಸಾವಿರಾರು ಮಂಧಿಯ ಉದ್ಯೋಗಸೃಷ್ಟಿಗೆ ಕಾರಣವಾಗುವ ಸಹಕಾರಿ ಸಂಸ್ಥೆಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುತ್ತದೆ, ಸವಿತಾ ಸಮಾಜ ಮನುಷ್ಯನಲ್ಲಿ ದೇವರನ್ನು ಕಾಣುವುದು ಸವಿತಾ ಸಮಾಜ ಎಂದರು.
ಸೌಹಾರ್ದ ಸಹಕಾರಿ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಹಕಾರ ಹಾಗೂ ಪ್ರೋತ್ಸಾಹದಿಂದ ಸಹಕಾರಿ ಪ್ರಗತಿಯತ್ತ ಮುನ್ನಡೆದಿದ್ದು, ಎಲ್ಲರ ಸಹಯೋಗ ಅಗತ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ವಿಭಾಗದ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಎಸ್.ಡಿ.ಸೋಮಪ್ಪ, ಸವಿತಾ ಸಮಾಜದ ದ.ಕ.ಜಿಲ್ಲಾ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನಿವೃತ್ತ ಶಾಖಾ ವ್ಯವಸ್ಥಾಪಕ ವಿ.ಪ್ರಭಾಕರ ಎಂ.ಪೈ, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಕಚ್ಚೂರು ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ ಚಂದ್ರಶೇಖರ ಭಂಡಾರಿ ಕುಳಾಯಿ, ದ.ಕ.ಜಿಲ್ಲಾ ಮಂಗಳೂರು ಲೇಡಿಸ್ ಬ್ಯೂಟಿ ಎಸೋಸಿಯೇಶನ್ ಉಪಾಧ್ಯಕ್ಷೆ ಸುಲತಾ ಸುರತ್ಕಲ್, ಉದ್ಯಮಿ ನವಾಝ್ ಎಮ್ಮೆಕೆರೆ ಉಪಸ್ಥಿತರಿದ್ದು ಶುಭ ಹಾರೈಸಿದರು. ನಿರ್ದೇಶಕರಾದ ಮೋಹನ್ ಭಂಡಾರಿ ಪೊಯ್ತಾಜೆ, ಭುಜಂಗ ಸಾಲಿಯಾನ್ ಬಿ.ಸಿ.ರೋಡ್, ಪದ್ಮನಾಭ ಭಂಡಾರಿ ಸುಳ್ಯ, ಎಸ್. ರವಿ ಮಡಂತ್ಯಾರು, ವಸಂತ ಎಂ.ಬೆಳ್ಳೂರು, ಆಶಾ ಕಂದಾವರ, ಸುಮಲತಾ ಪುತ್ತೂರು ಉಪಸ್ಥಿತರಿದ್ದರು.
ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಹಾಗೂ ಸಹಕಾರಿ ನಡೆದುಬಂದ ದಾರಿಯನ್ನು ವಿವರಿಸಿದರು. ನಿರ್ದೇಶಕ ಹಾಗೂ ದ.ಕ.ಜಿಲ್ಲಾ ಸವಿತಾ ಸಮಾಜ ಕಾರ್ಯದರ್ಶಿ ವಸಂತ ಎಂ.ಬೆಳ್ಳೂರು ಅವರನ್ನು ಸನ್ಮಾನಿಸಲಾಯಿತು. ಮೊದಲ ಠೇವಣಿದಾರರನ್ನು ಗೌರವಿಸಲಾಯಿತು. ಹರ್ಷಾ ಪ್ರಾರ್ಥಿಸಿದರು.ಅನೀಶ್ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ಸರಪಾಡಿ ವಂದಿಸಿದರು. ಪತ್ರಕರ್ತ ಕಿರಣ್ ಸರಪಾಡಿ ಕಾರ್ಯಕ್ರಮ ನಿರ್ವಹಿಸಿದರು.