ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋವರ್ಸ್ ರೇಂಜರ್ಸ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿತ್ತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗಿಡ ನೆಡುವ, ಗಿಡ ವಿತರಣೆ ಹಾಗೂ ಸ್ನೇಕ್ ಕಿರಣ್ ಇವರಿಂದ ಹಾವು ಮತ್ತು ನಾವು ಮಾಹಿತಿ ಕಾರ್ಯಕ್ರಮಗಳು ನಡೆದವು. ಕಾಲೇಜು ಅಭಿವೃದ್ಧಿ ಸಮಿತಿ ಅದ್ಯಕ್ಷ ಪ್ರಸಾದ್ ಕುಮಾರ್ ರೈ ಉದ್ಘಾಟಿಸಿದರು.
ತುಂಬೆ ವಿಭಾಗ ದ ಉಪ ಅರಣ್ಯ ವಲಯಾಧಿಕಾರಿ ಯಶೋಧಾ ಅರಣ್ಯ ಸಂರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರಕಾಶ್ಚಂದ್ರ ಗಿಡ ನೆಡುವುದರ ಮಹತ್ವ ಪ್ರಕೃತಿ ಪರಿಸರ ಸಮತೋಲನದ ಪ್ರಾಮುಖ್ಯತೆ ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ ಹೈದರಾಲಿ ಸ್ವಾಗತಿಸಿದರು. ರೇಂಜ್ಡ್ರ್ಸ್ ಘಟಕ ದ ಡಾ. ಅಪರ್ಣ ಆಳ್ವ ವಂದಿಸಿದರು. ಪ್ರೊ ಬಾಲಸುಬ್ರಮಣ್ಯ, ವಲಯ ಅರಣ್ಯ ಇಲಾಖೆಯ ಜಿತೇಶ್, ರೇಖಾ ಹಾಗೂ ಭಾಸ್ಕರ್ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು. ಜ್ಞಾನೇಶ್ ಕಾರ್ಯಕ್ರಮ ನಿರೂಪಿಸಿದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…