ವಿಠಲ್ ಜೇಸಿ ಪ್ಲೇ ಹೋಂ ನೂತನ ಕಟ್ಟಡ ‘ಜೇಸಿ ಕುಟೀರ’ ಸೋಮವಾರ ಲೋಕಾರ್ಪಣೆ ನಡೆಯಿತು.ಸಂಸ್ಥೆಯ ಅಧ್ಯಕ್ಷರ ಮಾತೃಶ್ರೀ ಕಮಲಮ್ಮ ಕೂಡೂರು ಉದ್ಘಾಟಿಸಿದರು.ಪ್ಲೇ ಹೋಂ ನ ಪುಟಾಣಿಗಳಿಗೆ ತಂದ ಒಳಾoಗಣ ಕ್ರೀಡಾ ಸಾಮಗ್ರಿಗಳನ್ನು ಜೆ ಸಿ ಐ ವಲಯ 15ರ ವಲಯ ಅಧ್ಯಕ್ಷರಾದ ರಾಯನ್ ಉದಯ ಕ್ರಾಸ್ತ ಅವರು ಉದ್ಘಾಟಿಸಿದರು.ಪ್ಲೇ ಹೋಂ ಪುಟಾಣಿಗಳಿಗೆ ಡಾಕ್ಟರ್ ವಿಶ್ವೇಶ್ವರ ವಿ.ಕೆ ಅವರು ಶಾಲಾ ಬ್ಯಾಗ್ ಅನ್ನು ವಿತರಿಸುವ ಮೂಲಕ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿಠಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎಲ್. ಎನ್ ಕೂಡೂರು ಪ್ಲೇ ಹೋಂನ ಯೋಜನೆ ಕಾರ್ಯ ಉದ್ದೇಶ ವಿವರಿಸಿದರು.
ಅತಿಥಿಗಳಾದ ಜೆ ಸಿ ಐ ರಾಯನ್ ಉದಯ ಕ್ರಾಸ್ತ, ಡಾ. ವಿಶ್ವೇಶ್ವರ ವಿ.ಕೆ ಶುಭ ಹಾರೈಸಿದರು.ಪ್ಲೇ ಹೋಂ ನ ಪುಟಾಣಿಗಳ ಹೆತ್ತವರಾದ ಶಶಿಕಲಾ ಮತ್ತು ಪುನೀತ್ ಮಾಡತ್ತಾರ್,ಮಂಗೇಶ್ ಭಟ್ ಅನಿಸಿಕೆ ವ್ಯಕ್ತಪಡಿಸಿದರು.ಹಿರಿಯ ವಿದ್ಯಾರ್ಥಿನಿಯಾದ ಅರ್ಷಿಯ ತನು ಅಧ್ಯಕ್ಷತೆ ವಹಿಸಿ, ಮಾತನಾಡಿದರು.ನೂತನ ಕಟ್ಟಡದ ಇಂಜಿನಿಯರ್ ಆದ ಸಂತೋಷ್ ಶೆಟ್ಟಿ ಪೆಲ್ತಡ್ಕ ಅವರನ್ನು ಸನ್ಮಾನಿಸಲಾಯಿತು. ಆಡಳಿತಾಧಿಕಾರಿ ರಾಧಾಕೃಷ್ಣ ಎ ಅವರು ಸಂಸ್ಥೆಯ ಬಗ್ಗೆ ಇಟ್ಟ ಜವಾಬ್ದಾರಿ ಮತ್ತು ಪರಿಶ್ರಮವನ್ನು ಗುರುತಿಸಲಾಯಿತು .ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ಮೋಹನ್ ಎ. ಇವರು ವಂದಿಸಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ,ಜೊತೆ ಕಾಯದರ್ಶಿಗಳಾದ ಶ್ರೀಪ್ರಕಾಶ್ ಕುಕ್ಕಿಲ, ಕೋಶಾಧಿಕಾರಿಗಳಾದ ಪ್ರಭಾಕರ್ ಶೆಟ್ಟಿ ದoಬೆಕಾನ, ನಿರ್ದೇಶಕರಾದ ಮೋನಪ್ಪ ಶೆಟ್ಟಿ ದೇವಸ್ಯ, ಗೋಕುಲ್ ಶೇಟ್, ಹಸನ್ ವಿಟ್ಲ, ವಿಜಯ ಪಾಯಸ್, ಚಂದ್ರಹಾಸ ಕೊಪ್ಪಳ, ಪ್ರಾಂಶುಪಾಲರಾದ ಜಯರಾಮ ರೈ ಉಪಸ್ಥಿತರಿದ್ದರು.ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗು ಹೇಮಲತಾ ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ, ಪುಟಾಣಿಗಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು.ಸಹ ಶಿಕ್ಷಕಿಯಾದ ಸವಿತಾ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಹಕರಿಸಿದರು.