ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ಸಹಯೋಗದಲ್ಲಿ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಅರಣ್ಯ ಇಲಾಖೆಯ ಅರಣ್ಯ ರಕ್ಷಕರಾದ ದಯಾನಂದ ಮತ್ತು ಅನಿತಾ ಶಾಲಾ ಪರಿಸರದಲ್ಲಿ ಗಿಡ ನೆಟ್ಟು ಶಾಲಾ ಮಕ್ಕಳು ಮತ್ತು ಪರಿಸರದ ವ್ಯಕ್ತಿಗಳಿಗೆ ಗಿಡಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸಿದರು.
ಶಿಕ್ಷಣ ಇಲಾಖೆಯ ಸಿಆರ್ ಪಿ ಸತೀಶ್ ಭಟ್, ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ಜೆಸಿಐ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್, ಶಿಕ್ಷಕರಾದ ಭಾರತಿ, ವಸಂತಿ, ವರಮಹಾಲಕ್ಷ್ಮೀ, ಪ್ರಕಾಶ್ , ಹರೀಶ್, ಮಂಜುಶ್ರೀ, ಶ್ರುತಿ ಉಪಸ್ಥಿತರಿದ್ದರು. ಶಾಲಾ ನಾಯಕ ಕಾರ್ತಿಕ್ ಸ್ವಾಗತಿಸಿ, ಶಿಕ್ಷಕಿ ಭಾರತಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…