ಕನ್ಯಾನದ ಕಣಿಯೂರು ಎಂಬಲ್ಲಿ ಜೆಸಿಬಿ ವಾಹನವೊಂದು ಸೈಕಲ್ ಚಲಾಯಿಸುತ್ತಿದ್ದ ಮಹಮ್ಮದ್ ಆಖಿಲ್ ಎಂಬ ಬಾಲಕನ ಮೇಲೆರಗಿದ ಪರಿಣಾಮ, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ತರುವಾಯ, ಬಾಲಕನನ್ನು ಜೆಸಿಬಿ ಕೊಕ್ಕೆಯಿಂದ ಪಕ್ಕಕ್ಕೆ ಸರಿಸುವ ಕೃತ್ಯವನ್ನು ಚಾಲಕ ಗದಗ ಮೂಲದ ಸಾದಿಕ್ ನಡೆಸಿರುವ ವಿಷಯ ತಿಳಿದು ಸ್ಥಳೀಯರು ಒಟ್ಟಾಗಿ ಚಾಲಕನ ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದರು. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…