ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ
ಬ್ರಹ್ಮಕಲಶೋತ್ಸವದಿಂದ ಸಕಾರಾತ್ಮಕ ವಾತಾವರಣ ಹಾಗೂ ದೈವಿಕ, ಬೌದ್ಧಿಕ ಮೌಲ್ಯಗಳಿಗೆ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಹೇಳಿದರು.
ಬಿ.ಸಿ.ರೋಡಿನ ಚಂಡಿಕಾನಗರದಲ್ಲಿರುವ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ 2023ರಲ್ಲಿ ನಡೆಯಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.
ದೈಹಿಕ ಮತ್ತು ಮಾನಸಿಕ ಕ್ಲೇಶಗಳನ್ನು ನಿವಾರಿಸುವ ಶಕ್ತಿಯನ್ನು ಚಂಡಿಕಾಪರಮೇಶ್ವರಿ ದೇವರು ನೀಡುತ್ತಾರೆ ಎಂಬ ನಂಬಿಕೆ ನಮಗಿದೆ. ಬ್ರಹ್ಮಕಲಶೋತ್ಸವ ನಮ್ಮ ಅಸ್ತಿತ್ವ ಹಾಗೂ ಧರ್ಮಗಳನ್ನು ಬಡಿದೆಬ್ಬಿಸಿವೆ ಎಂದವರು ಹೇಳಿದರು.
ಚಂಡಿಕಾಪರಮೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಪ್ರಮುಖರಾದ ಐತಪ್ಪ ಆಳ್ವ, ಇಂದಿರೇಶ್ ವೇದಿಕೆಯಲ್ಲಿದ್ದರು. ಗಣ್ಯರಾದ ರವಿಶಂಕರ ಶೆಟ್ಟಿ ಬಡಾಜೆಗುತ್ತು, ರಾಕೇಶ್ ಮಲ್ಲಿ, ಅಶ್ವನಿ ಕುಮಾರ್ ರೈ, ವಿಶ್ವನಾಥ ಪೂಜಾರಿ, ಸದಾನಂದ ಶೆಟ್ಟಿ ರಂಗೋಲಿ, ಸಂಜೀವ ಪೂಜಾರಿ, ಮನೋಹರ ಶೆಟ್ಟಿ, ಹರೀಶ್ ಪೂಂಜರಕೋಡಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖರಾದ ಸತೀಶ್ ಭಂಡಾರಿ, ರಾಜೇಶ್ ಎಲ್. ನಾಯಕ್ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಯಿತು.
ಸಮಿತಿ ವಿವರ: ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ, ಉಪಾಧ್ಯಕ್ಷರಾಗಿ ರಂಗೋಲಿ ಸದಾನಂದ ಶೆಟ್ಟಿ, ಕಾರ್ಯದರ್ಶಿಗಳಾಗಿ ಬಿ.ರಾಮಚಂದ್ರ ರಾವ್, ಜೊತೆ ಕಾರ್ಯದರ್ಶಿಯಾಗಿ ಶಂಕರ ಶೆಟ್ಟಿ, ಕೋಶಾಧಿಕಾರಿಯಾಗಿ ಸಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ, ಅಶ್ವನಿ ಕುಮಾರ್ ರೈ, ಪ್ರದೀಪ್ ರಾವ್ ಬಂಟ್ವಾಳ, ಚರಣ್ ಜುಮಾದಿಗುಡ್ಡೆ, ಪ್ರಮೋದ್ ಅಜ್ಜಿಬೆಟ್ಟು. ಜೊತೆಕಾರ್ಯದರ್ಶಿಯಾಗಿ ಐತಪ್ಪ ಪೂಜಾರಿ ಮತ್ತು ಮಂಜು ವಿಟ್ಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.