ಬಂಟ್ವಾಳ: ನಾವೂರ ಗ್ರಾಮ ಪಂಚಾಯತ್ಗೆ ಒಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಬೇಟಿ ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮ ಮಾಜಿ ಸಚಿವ ಬಿ.ರಮಾನಾಥ ರೈ ಮಾರ್ಗದರ್ಶನದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ-ಜಾತಿಯ ಮಧ್ಯೆ ಧರ್ಮ-ಧರ್ಮದ ಮಧ್ಯೆ ನಡೆಯುವ ಬೆಳವಣಿಗೆಗಳು ಅಪಾಯಕಾರಿಯಾಗಿದ್ದು ಕಾಂಗ್ರೆಸ್ ಪಕ್ಷವು ಯಾವುದೇ ಕಾರಣಕ್ಕೂ ಇಂತಹ ಪ್ರಚೋದನೆಯನ್ನು ಸಹಿಸುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕಾರ್ಯಕರ್ತರ ಒಗ್ಗಟ್ಟು ಹಾಗೂ ಪರಿಶ್ರಮದಿಂದ ಮಾತ್ರ ಪಕ್ಷ ಬಲಿಷ್ಠವಾಗಲು ಸಾಧ್ಯವಾದಿತು ಎಂದು ತಿಳಿಸಿದರು.
ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ತಕ್ಷಣದಿಂದಲೇ ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಮಾಜಿ ಅಕ್ರಮ ಸಕ್ರಮ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್, ಪಂಚಾಯತ್ ಅಧ್ಯಕ್ಷರಾದ ಉಮೇಶ್ ಕುಲಾಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪರಾಜ್ ನಾವೂರ, ಗ್ರಾಮ ಪಂಚಾಯತ್ ಸದಸ್ಯರಾದ ಸುವರ್ಣಕುಮಾರ್ ಜೈನ್, ಎಮ್.ಕೆ.ಮೊಹಮ್ಮದ್, ಲವೀನ ಶಾಂತಿ, ಜ್ಯೋತಿ, ಬೂತ್ ಸಮಿತಿ ಅಧ್ಯಕ್ಷರಾದ ಜಾನ್ ಕಿಶೋರ್, ಮೊಹಮ್ಮದ್ ಹನೀಫ್ ಮುಖಂಡರಾದ ವಾಸು ಪೂಜಾರಿ, ಪೂವಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ಶ್ರೀನಿವಾಸ, ಶರತ್ ಕುಮಾರ್, ವಿಜಯ ಅಲ್ಲಿಪಾದೆ, ಪದ್ಮಶೇಖರ್ ಜೈನ್ ಬೀದಿ, ಹಕೀಂ, ಕರೀಂ, ಸುಲೈಮಾನ್, ಮಹೇಶ್, ಗಣೇಶ್ ಕುಲಾಲ್, ಅಝೀಜಾ ನಾವೂರ, ಅಬೂಬುಕರ್ ಪಲ್ಲಿಗುಡ್ಡೆ, ಆದಂ ಪಲ್ಲಿಗುಡ್ಡೆ, ಲಕ್ಷಣ ಬೀದಿ, ಮುಸ್ತಾಫ ಪಲ್ಲಿಗುಡ್ಡೆ, ಜಾನೇಟ್ ಪಿಂಟೋ ಉಪಸ್ಥಿತರಿದ್ದರು.