ಕವರ್ ಸ್ಟೋರಿ

ಮನೆಗೆ ತೆರಳುವ ದಾರಿ ಕಾಣದಾಗಿದೆ – ಹೆದ್ದಾರಿ ಬದಿ ನಿವಾಸಿಗಳಿಂದ ಸಿಎಂಗೆ ಪತ್ರ

ಕಲ್ಲಡ್ಕ: ಮನೆಗೆ ತೆರಳಲು ದಾರಿ ತೋರಿಸಿ ಎಂದು ಮುಖ್ಯಮಂತ್ರಿಗೆ ರಾಷ್ಟ್ರೀಯ ಹೆದ್ದಾರಿ ಬದಿಯ ನಿವಾಸಿಗಳು ಪತ್ರ ಬರೆದಿದ್ದಾರೆ. ರಸ್ತೆ ಅಗಲಗೊಳಿಸುವ ಕಾರ್ಯದ ವೇಳೆ ತಮ್ಮ ಮನೆಗೆ ತೆರಳುವ ರಸ್ತೆಗಳು ಬಂದ್ ಆಗಿರುವುದು ಇದಕ್ಕೆ ಕಾರಣ. ಈ ಕುರಿತು ಸೂರಿಕುಮೇರು ನಿವಾಸಿ ಗೋಪಾಲ ಶಾಸ್ತ್ರಿ ಎಂಬವರು ಸಿಎಂಗೆ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ರಸ್ತೆ ನಂಬರ್ 75ರ ಚತುಷ್ಪಥ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈಗ ಗುಡುಗು ಸಿಡಿಲು ಮಳೆ ಈ ಭಾಗದಲ್ಲಿ ಪ್ರಾರಂಭ ಆಗಿದೆ ಇದರಿಂದ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದ್ದಲ್ಲದೆ, ಮೊನ್ನೆ ಸುರಿದು ಮಳೆಗೆ ಅಡಿಕೆ ತೋಟದಲ್ಲಿ ಮಳೆ ನೀರು ಕೆಸರು ತುಂಬಿ ಸಂಪೂರ್ಣ ಅಡಿಕೆ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ ಎಂದು ಹೇಳಿರುವ ಶಾಸ್ತ್ರಿ, ಕೂವೆಕೋಡಿ ನಿವಾಸಕ್ಕೆ ಹೋಗುವ ಸಂಪೂರ್ಣ ರಸ್ತೆ ಸಂಪರ್ಕಯನ್ನ ಕಳೆದು ಕೊಂಡುದ್ದಲ್ಲದೆ, ಕೃಷಿಭೂಮಿಯಲ್ಲಿ ಇರುವ ಅಡಿಕೆ ತೆಂಗು ಬಾಳೆ , ಕರಿಮೆಣಸು ಕೃಷಿ ಮಳೆನೀರು ಕೆಸರು ತುಂಬಿ ಫಸಲು ನೆಲಕಚ್ಚುವ ಭೀತಿ ಎದುರಾಗಿದೆ ಎಂದಿದ್ದಾರೆ.

ಈ ಬಗ್ಗೆ ಸುಮಾರು 20 ರಿಂದ 25 ಅಡಿ ಎತ್ತರಕ್ಕೆ ಸ್ಲೋಪ್ ನಿರ್ಮಾಣ ಮಾಡಲು ಹಾಕಿದ ಮಣ್ಣು   ಅಡಿಕೆ, ತೆಂಗು, ಬಾಳೆ, ಕರಿಮೆಣಸು, ಬೆಳೆ ಬೆಳೆಯುವ ತೋಟಕ್ಕೆ ನೀರು ಕೆಸರು ತುಂಬಿ ಕುಸಿಯುವ ಭೀತಿ ಎದುರಾಗಿದೆ ಎಂದವರು ಗಮನ ಸೆಳೆದಿದ್ದಾರೆ.  

ಬಾಯ್ದೆರೆ, ಪತ್ರ ಮುಖೇನ ವಿನಂತಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ನಾಗರಿಕರಾಗಿರುವ ಗೋಪಾಲ ಶಾಸ್ತ್ರಿ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ