Categories: ಬಂಟ್ವಾಳ

ನರಿಕೊಂಬು ಬಿರುವೆರ್ ಸೇವಾ ಟ್ರಸ್ಟ್ ನಿಂದ ಆರ್ಥಿಕ ನೆರವು

FOR ADVERTISEMENTS PLEASE CONTACT: HARISH MAMBADY, 9448548127

ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್  ನರಿಕೊಂಬು ಬಂಟ್ವಾಳ  ಇದರ ವತಿಯಿಂದ  ಮರ್ದೋಳಿಯ ಬಡಕುಟುಂಬಕ್ಕೆ ಮನೆ ದುರಸ್ತಿ ಕಾರ್ಯಕ್ಕೆ 15 ಸಾವಿರ ರೂಪಾಯಿಯ ಆರ್ಥಿಕ ನೆರವಿನ ಚೆಕ್ ಅನ್ನು ಹಸ್ತಾಂತರಿಸಲಾಯಿತು.

ನರಿಕೊಂಬು ಗ್ರಾಮದ ಮರ್ದೋಳಿಯಲ್ಲಿ ವಾಸವಾಗಿರುವ ಪುಪ್ಪಲತಾ ಎಂಬವರು ತನ್ನ ಪತಿಯನ್ನು ಕಳೆದುಕೊಂಡು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರ ಮನೆಯ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಗೆ ತಲುಪಿದ್ದು ಬಡಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಆರ್ಥಿಕ ಸಹಾಯ ನೀಡಲಾಯಿತು.

ಈ ಸಂದರ್ಭ  ಸಂಸ್ಥೆಯ ಅಧ್ಯಕ್ಷ ದಿನೇಶ್ ಭಾಗೀರತಿ ಕೋಡಿ, ಗೌರವಾಧ್ಯಕ್ಷ  ಕೃಷ್ಣಪ್ಪ ಪೂಜಾರಿ ನಾಟಿ, ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್, ಉಪಾಧ್ಯಕ್ಷ ಪ್ರಮೋದ್ ಕೇದಿಗೆ, ಕೋಶಾಧಿಕಾರಿ ಸದಾಶಿವ ನಾಟಿ, ಸಂಘಟನಾ ಕಾರ್ಯದರ್ಶಿ ಮನೋಜ್ ನಿರ್ಮಲ್, ಟ್ರಸ್ಟಿಗಳಾದ ಯೋಗೀಶ ಅಮೀನ್ ನಾಟಿ, ಸೀತಾರಾಮ್ ಬೋಳಂತೂರು, ರಾಜೇಶ್ ಬೋಳಂತೂರು, ನಾರಾಯಣ ದರ್ಕಸ್, ಶಂಕರ ನಾಟಿ ಪ್ರಮುಖರಾದ ಉಮೇಶ್ ನಾಯಿಲ, ಮಾಧವ ಕರ್ಬೇಟ್ಟು, ವಿಜಯ ಸಾಲ್ಯಾನ್ ನಾಯಿಲ, ಭಾರತಿ ನಾಯಿಲ, ಮತ್ತು ಮಹಿಳಾ ಸದಸ್ಯರು ಉಪಸ್ಥಿತರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ