ಮೆಲ್ಕಾರ್: ಬಂಟ್ವಾಳ ತಾಲೂಕಿನ ಬೆಳೆಯುತ್ತಿರುವ ಪಟ್ಟಣವಾಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವ ಮೆಲ್ಕಾರ್ ನಲ್ಲಿ ಪ್ರಸಿದ್ಧ ಆಭರಣ ಮಳಿಗೆ RJ – Gold, Diamond, Silver. Grand ReOpening ನಡೆಯಲಿದೆ.
ಮೆಲ್ಕಾರ್ ನ ಯುನಿವರ್ಸಿಟಿ ರಸ್ತೆಯ ಎಂ.ಎಚ್. ಹೈಟ್ಸ್ ನಲ್ಲಿ ಇರುವ ಮಳಿಗೆಯಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನೆರವೇರಲಿದೆ. ಸಯ್ಯಿದ್ ಕೆ.ಎಸ್. ಆಟ್ಟಕೊಯ ತಂಞಳ್, ಕುಂಬೋಳ್ ಮತ್ತು ಜನಾಬ್ ಕೆ.ಪಿ.ಇರ್ಷಾದ್ ದಾರಿಮಿ ಆಲ್-ಜಝೂರಿ ಮಿತ್ತಬೈಲ್, ಅವರು ದುಃವಾ ಆಶೀರ್ವಾದ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುರಸಭಾ ಸದಸ್ಯ ಮುನೀಶ್ ಆಲಿ, ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ. ಭಾಗವಹಿಸಲಿದ್ದಾರೆ ಎಂದು ಆರ್.ಜೆ. ಗೋಲ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ವಿವಿ ರಸ್ತೆಯ ಎಂ.ಎಚ್. ಹೈಟ್ಸ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಆರ್.ಜೆ. ಗೋಲ್ಡ್ ಚಿನ್ನಾಭರಣ ಮಳಿಗೆ ಈಗ ವಿಸ್ತೃತಗೊಂಡು ಶುಭಾರಂಭಗೊಳ್ಳುವ ಹಿನ್ನೆಲೆಯಲ್ಲಿ ಲಕ್ಕಿ ಡ್ರಾ ಇರಲಿದೆ.
ಉದ್ಘಾಟನಾ ಸಮಾರಂಭದ ದಿನ ಶುಭಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಮ್ಮುಖದಲ್ಲಿ ಲಕ್ಕಿ ಡ್ರಾ ನಡೆಯಲಿದ್ದು, ಸಮಾರಂಭದಲ್ಲಿ ಭಾಗವಹಿಸಿ ವಿಜೇತರಾಗುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.
ಸರಕಾರದ ನಿಯಮ ಪ್ರಕಾರ bis ಹಾಲ್ ಮಾರ್ಕ್ 916 (22ಕೆ) ಪರಿಶುದ್ದವಾದ ಅತೀ ಕಡಿಮೆ ಮೇಕಿಂಗ್ ಚಾರ್ಜಿನಲ್ಲಿ ಗ್ರಾಗಕರ ವಿಶ್ವಾಸಕ್ಕೆ ಅನುಕೂಲವಾಗಿ ವಿವಿಧ ಡಿಸೈನುಗಳು, ಸಂಸ್ಥೆಯು ಲೋಕೋತ್ತರ ಡಿಸೈನುಗಳಾದ ಟರ್ಕಿ, ಆಂಟಿಕ್, ಕುಂದನ್, ಸಿಗ್‍ನಿಟಿಕ್, ಒರೋ, ರಾಜ್‍ಕೋಟ್, ಕಲ್ಕತ್ತಾ, ಕೇರಳ ಕಲೆಕ್ಷನ್ ಗಳ ಅತೀ ವಿಶಾಲವಾದ ಶೇಖರಣೆಯನ್ನು ಹೊಂದಿರುತ್ತದೆ. ಚಿನ್ನಾಭರಣ ಮಜೂರಿಯಲ್ಲಿ 35% ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ