ಮಂಗಳೂರು ಪಡೀಲ್ ನಲ್ಲಿ ಸ್ಕೂಟರ್ ನಲ್ಲಿ ಸಾಗುತ್ತಿದ್ದ ಸಂದರ್ಭ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಉಡುಪಿ ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲಾ ಲೆಕ್ಕಪತ್ರಪರಿಶೋಧಕರಾಗಿದ್ದು ನಿವೃತ್ತರಾಗಿದ್ದು, ಬಿ.ಸಿ.ರೋಡಿನ ಕೆ.ಎನ್.ರಮೇಶ್ (67) ಚಿಕಿತ್ಸೆ ಫಲಕಾರಿಯಾಗದೆ ಮೇ 22ರಂದು ನಿಧನ ಹೊಂದಿದರು. ಪತ್ನಿ, ಮಗಳ ಸಹಿತ ಅಪಾರ ಬಂಧು ಬಳಗವನ್ನು ಅವರು ಹೊಂದಿದ್ದರು. ಮೇ.7ರಂದು ಸಂಜೆ ಮಂಗಳೂರು ಪಡೀಲ್ ನಲ್ಲಿ ಸ್ಕೂಟರ್ ನಲ್ಲಿ ಬಿ.ಸಿ.ರೋಡಿಗೆ ಬರುತ್ತಿದ್ದ ಸಂದರ್ಭ ಕಾರೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ, ತಲೆಗೆ ತೀವ್ರ ಏಟಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 16 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 22ರಂದು ಕೊನೆಯುಸಿರೆಳೆದರು. ಭಾಲ್ಕಿ, ಹಾಸನ, ಬೆಳ್ತಂಗಡಿ ಸುಳ್ಯ ಸಹಿತ ರಾಜ್ಯದ ವಿವಿಧೆಡೆ ಅವರು ಲೆಕ್ಕಾಧೀಕ್ಷಕ ಸಹಿತ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಉಡುಪಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲಾ ಲೆಕ್ಕಪತ್ರಪರಿಶೋಧಕರಾಗಿ ನಿವೃತ್ತಹೊಂದಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)